ಮಂಗಳೂರು, ಸೆ.೧೪ (DaijiworldNews/SM): ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಮಾದುವುದು ಸರಿಯಲ್ಲ. ಡ್ರಗ್ಸ್ ನಿಯಂತ್ರಣಕ್ಕೆ ಸರಕಾರ ಕೈಗೊಂಡ ಕ್ರಮದ ಬಗ್ಗೆ ಸ್ಪಷ್ಟಪಡಿಸಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ನಗರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಡ್ರಗ್ಸ್ ವಿಚಾರಕ್ಕೆ ರಾಜಕೀಯವನ್ನು ಮಧ್ಯೆ ತರುವುದು ಸರಿಯಲ್ಲ ಎಂದಿದ್ದಾರೆ. ಇನ್ನು ವಿಧಾನ ಸಭಾ ಅಧಿವೇಶನವನ್ನು ವಿಸ್ತರಿಸಬೇಕು.
8 ದಿನಗಳ ಕಾಲ ನಿಗದಿಯಾಗಿರುವ ಅಧಿವೇಶನವನ್ನು ಕನಿಷ್ಠ 10 ದಿನಗಳ ಕಾಲವಾದರೂ ಮಾಡಬೇಕು. ಅಧಿವೇಶನದಲ್ಲಿ ಹೊಸ ಬಿಲ್ ಮಂಡನೆಯನ್ನು ಮುಂದೂಡಬೇಕು. ಹಾಲಿ ಅಧಿವೇಶನ ಕೇವಲ ಕಾಟಾಚಾರಕ್ಕೆ ಕರೆದಂತೆ ಕಾಣುತ್ತದೆ ಎಂದು ಶಾಸಕ ಖಾದರ್ ಆರೋಪಿಸಿದ್ದಾರೆ.
ಇನ್ನು ರಾಜ್ಯದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಸರಕಾರ ಮಾಡುತ್ತಿದೆ. ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆ ನಡೆಯಬೇಕು. ಈ ಅಧಿವೇಶನದಲ್ಲಿ ಹೊಸ ಮಸೂದೆಗಳ ಮಂಡನೆಯ ಅಗತ್ಯವೇನಿದೆ? ಎಂದು ಖಾದರ್ ಪ್ರಶ್ನಿಸಿದ್ದಾರೆ.