ಮಂಗಳೂರು,ಸೆ.15(DaijiworldNews/HR): ಇಂದು ಬೆಳಗ್ಗೆ ಫಾ. ವಿಜಯ್ ಕುಮಾರ್ ಪ್ರಭು(80) ನಿಧನರಾಗಿದ್ದಾರೆ.

ಫಾತಿಮಾ ರಿಟ್ರೀಟ್ ಹೌಸ್ನಲ್ಲಿ ತಂಗಿದ್ದ ಫಾ.ವಿಜಯ್ ಕೆ ಪ್ರಭು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1940 ರಲ್ಲಿ ಜನಿಸಿದ ಪ್ರಭು 2004 ಮತ್ತು 2009 ರ ನಡುವೆ ಕರ್ನಾಟಕ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ್ದರು.
ಅವರು ನಗರದ ಸೇಂಟ್ ಜೋಸೆಫ್ ಸೆಮಿನರಿ, ಸೇಕ್ರೆಡ್ ಹಾರ್ಟ್ ಕಾಲೇಜು, ಶೆಂಬಗನೂರ್ ಮತ್ತು ಚೆನ್ನೈನ ಸತ್ಯ ನಿಲಯದಲ್ಲಿ ಕಲಿಸುತ್ತಿದ್ದರು. ಸತ್ಯ ನಿಲಯದಲ್ಲಿದ್ದಾಗ, 1992 ರಿಂದ 1996 ರವರೆಗೆ ಅವರು ತತ್ವಶಾಸ್ತ್ರದ ಡೀನ್ ಆಗಿ ಸೇವೆ ಸಲ್ಲಿಸಿದ್ದರು.
2009-2010ರಲ್ಲಿ ಬೆಂಗಳೂರಿನ ಐಎಸ್ಐನ ಗ್ರಂಥಪಾಲಕರಾಗಿಯೂ ಸೇವೆ ಸಲ್ಲಿಸಿದ್ದರು.
ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 3.30 ಕ್ಕೆ ಜೆಪ್ಪು ಸ್ಮಶಾನದಲ್ಲಿ ನಡೆಯಲಿದೆ. ಕೊರೊನಾ ನಿರ್ಬಂಧದಿಂದಾಗಿ, ಸೀಮಿತ ಸಂಖ್ಯೆಯ ಜನರು ಮಾತ್ರ ಹಾಜರಾಗಲಿದ್ದಾರೆ.