ಮಂಗಳೂರು, ಸೆ.15(DaijiworldNews/HR): ಕೆಂಗಣ್ಣಿನಿಂದ ಕೆಕ್ಕರಿಸಿ ಗೆಲ್ಲಲಾರೆ ಎಂಬ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಬಬ್ರುವಾಹನ ಸಿನಿಮಾದ ಡೈಲಾಗ್ ಚಿರಪರಿಚಿತ. ಇದೀಗ ಈ ಡೈಲಾಗ್ನ್ನು ತನ್ನ ಪುಟ್ಟ ದನಿಯಲ್ಲಿ ಹೇಳಿರುವ ಸುಳ್ಯದ 4 ರ ಪೋರ ಡಾ. ರಾಜ್ಕುಮಾರ್ ಪುತ್ರ, ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಮನಗೆದಿದ್ದಾನೆ.

ಸುಳ್ಯ ತಾಲೂಕಿನ ಪಂಜದ ಪುಟಾಣಿ ಪ್ರತಿಭೆ ಆಕಾಶ್ ಭಟ್ (4 ) ಪುನೀತ್ ರಾಜ್ಕುಮಾರ್ ಮನಗೆದ್ದಿದ್ದಾನೆ.
ಇನ್ನು ಪುಟಾಣಿಯ ಡೈಲಾಗ್ ಗೆ ಮೆಚ್ಚಿಕೊಂಡ ನಟ ಪುನೀತ್ ರಾಜ್ಕುಮಾರ್ ಮೆಚ್ಚುಗೆಯ ಆಡಿಯೋವೊಂದನ್ನು ಮಾಡಿ, ತಮ್ಮ ತಂದೆ ರಾಜ್ ಕುಮಾರ್ ಅವರ ಬಬ್ರುವಾಹನ ಸಿನಿಮಾದ ಡೈಲಾಗ್ ಆ ಪುಟ್ಟ ಅಭಿಮಾನಿಯ ಹೃದಯ ತಟ್ಟಿದ್ದು, ಆ ಬಾಲಕನ ಬಾಯಲ್ಲಿ ಕೇಳಿ ತುಂಬಾ ಸಂತೋಷವಾಗುತ್ತಿದೆ. ಹಾಗಾಗಿ ತಂದೆ ಹೇಳುತ್ತಿದ್ದಂತೆಯೇ ಅಭಿಮಾನಿಗಳೇ ನಮ್ಮ ದೇವರು, ಈ ಪುಟ್ಟ ಅಭಿಮಾನಿಗೆ ನನ್ನ ವಂದನೆಗಳು ಎಂದು ಹೇಳಿದ್ದಾರೆ.
ಇದೀಗ ಪುಟಾಣಿ ಪೋರನ ಡೈಲಾಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.