ಬಂಟ್ವಾಳ,ಮೇ 09 : ಬಿಜೆಪಿ ಅಭ್ಯರ್ಥಿ ಪರ ಜನಬೆಂಬಲ ವ್ಯಕ್ತವಾಗುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಹಾಗೂ ಕಾಂಗ್ರೇಸ್ ಭಯಭೀತರಾಗಿದ್ದಾರೆ ಎಂದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಂಟ್ವಾಳದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಅವರು ಬುಧವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದರಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಈಗಾಗಲೇ ಮೂರು ಸುತ್ತಿನ ಮನೆಭೇಟಿ ಕಾರ್ಯಕ್ರಮಗಳು ನಡೆದಿವೆ. ನಾಮಪತ್ರ ಸಲ್ಲಿಕೆ ಸಂದರ್ಭವೂ ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಗಿ ರಾಜ್ಯಾದ್ಯಂತ ಗಮನ ಸೆಳೆದಿತ್ತು. ನಮ್ಮ ಅಭ್ಯರ್ಥಿ ತೆರಳಿದ ಕಡೆಗಳಲ್ಲೆಲ್ಲ ಜನರು ಅದ್ಭುತ ಸ್ಪಂದನೆ ನೀಡುತ್ತಿದ್ದಾರೆ ಎಂದು ನಳಿನ್ ಹೇಳಿದರು.
ಸಚಿವ ರೈ ಯವರ್ನು ರಾಜ್ಯದ ಮಹಾಮೋಸಗಾರ ಎಂದು ಟೀಕಿಸಿದ ನಳಿನ್, ಬಿಜೆಪಿ ಸರಕಾರದ ಅವಧಿಯಲ್ಲಿ ತರಲಾದ ಯೋಜನೆಗಳನ್ನು ಅವರು ಕಾರ್ಯರೂಪಕ್ಕಿಳಿಸಿದ್ದಾರೆಯೇ ಹೊರತು ಯಾವುದೇ ಯೋಜನೆಗಳನ್ನು ತಂದಿಲ್ಲ. ಪರಿಸರ ಸಚಿವರಾಗಿದ್ದು, ಒಳಚರಂಡಿ ವ್ಯವಸ್ಥೆಯನ್ನು ಬಂಟ್ವಾಳಕ್ಕೆ ಮಾಡಿಸಲು ರೈ ಅವರಿಂದ ಆಗಲಿಲ್ಲ ಎಂದ ನಳಿನ್, ಅವರೊಬ್ಬ ಶೂನ್ಯ ಸಂಪಾದನೆಯ ನಾಯಕ, ತನ್ನ ಸ್ವಗ್ರಾಮ ಕಳ್ಳಿಗೆ ಎಷ್ಟು ಅಭಿವೃದ್ಧಿ ಆಗಿದೆ ಎಂದು ನೋಡಿಕೊಳ್ಳಲಿ ಎಂದರು. ಬಂಟ್ವಾಳದಲ್ಲಿ ಮರಳು ಮಾಫಿಯಾ ಮಿತಿಮೀರಿದ್ದು, ಸಚಿವರ ಹಿಂಬಾಲಕರ ಮೇಲೆ ಕೇಸ್ ಇದೆ, ಯಾವಾಗ ರಮಾನಾಥ ರೈ ದ.ಕ.ಜಿಲ್ಲಾ ಉಸ್ತುವಾರಿ ಆದರೋ ಅಲ್ಲಿಂದ ತಾಲೂಕಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ ್ಇದಕ್ಕೆ ರಮಾನಾಥ ರೈ ಅವರೇ ನೇರ ಹೊಣೆ ಎಂದು ದೂರಿದರು.
ಯೋಗಿ ಬಂಟ್ವಾಳಕ್ಕೆ: ಯೋಗಿ ಆದಿತ್ಯನಾಥ್ ಅವರು ಗುರುವಾರ ಮಧ್ಯಾಹ್ನ ಬಂಟ್ವಾಳಕ್ಕೆ ಆಗಮಿಸಲಿದ್ದು, 2.30 ಗೆ ನಡೆಯುವ ರೋಡ್ ಶೋ ಮತ್ತು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ನಳಿನ್ ಹೇಳಿದರು.
ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ರಾಮದಾಸ ಬಂಟ್ವಾಳ, ದೇವಪ್ಪ ಪೂಜಾರಿ, ಸಚ್ಚಿದಾನಂದ ಶೆಟ್ಟಿ, ಸುಲೋಚನಾ ಜಿ.ಕೆ. ಭಟ್ ಉಪಸ್ಥಿತರಿದ್ದರು.