ಉಡುಪಿ, ಸೆ. 19 (DaijiworldNews/MB) : ದ್ವಿಚಕ್ರ ವಾಹನ ಸವಾರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆಕೋರರು ಹಣ ಮತ್ತು ಮೊಬೈಲ್ ಫೋನ್ ದೋಚಿದ ಘಟನೆ ಸೆಪ್ಟೆಂಬರ್ 19 ರ ಶನಿವಾರ ಮುಂಜಾನೆ 4.30 ರ ಸುಮಾರಿಗೆ ಇಂದ್ರಾಳಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಉದ್ಯೋಗಿಯಾಗಿರುವ ದ್ವಿ ಚಕ್ರ ವಾಹನ ಸವಾರ ನಿತೇಶ್ ದೇವಾಡಿಗ ಅವರು ರೈಲ್ವೆ ನಿಲ್ದಾಣದಿಂದ ಸ್ಕೂಟರ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ತಡೆದು ಹಲ್ಲೆ ನಡೆಸಿ 19,000 ರೂ.ಗಳ ನಗದು ಮತ್ತು ಎದೆಗೆ ಗಾಯವಾಗಿದೆ. ಮೊಬೈಲ್ ಫೋನ್ ದೋಚಿದ್ದಾರೆ. ಈ ಘಟನೆಯ ಸಂದರ್ಭ ನಿತೇಶ್ ದೇವಾಡಿಗ ಅವರ ಎದೆಗೆ ಗಾಯವಾಗಿದೆ.
ಈ ಬಗ್ಗೆ ಮಣಿಪಾಲ್ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಮಣಿಪಾಲ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಅವರು, ಅಪರಾಧ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ದರೋಡೆಕೋರರ ತಂಡವು ಪಟ್ಟಣದಲ್ಲಿ ಕಾರ್ಯಚರಿಸುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ದರೋಡೆಕೋರರ ಪತ್ತೆ ಕಾರ್ಯಚರನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.