ಮಂಗಳೂರು, ಸೆ 19 (DaijiworldNews/PY): ಕೂಳೂರಿನ ಶಾಲೆಯ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸೆ.19 ರ ಶನಿವಾರದಂದು ನಡೆದಿದೆ.



ಮೃತರನ್ನು ನೀರುಮಾರ್ಗದ ನಿವಾಸಿ ಉಮೇಶ್ (38) ಎಂದು ಗುರುತಿಸಲಾಗಿದೆ. ಘಟನೆಯ ಸಂಭವಿಸಿದ ಸಂದರ್ಭ ಇವರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕಾಂಪೌಂಡ್ ಗೋಡೆ ಕುಸಿದಿದೆ.
ಇದ್ದಕ್ಕಿದ್ದಂತೆ ತಡೆಗೋಡೆ ಕುಸಿದ ಪರಿಣಾಮ ಉಮೇಶ್ ಅವರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಚರಣೆ ಮಾಡಿದರೂ ಕೂಡಾ ಉಮೇಶ್ ಅವರು ಮೃತಪಟ್ಟಿದ್ದರು.
ಘಟನೆಯ ಬಗ್ಗೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.