ಕಾಸರಗೋಡು, ಸೆ. 19 (DaijiworldNews/MB) : ಬೆಂಗಳೂರು ಕೋರಮಂಗಲ ದಲ್ಲಿ ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಮಂಜೇಶ್ವರ ನಿವಾಸಿಯಾದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ.

ಮಂಜೇಶ್ವರ ಪಾಂಡ್ಯಾಲ ದ ಮುಸ್ತಫಾ - ಖೈರುನ್ನೀಸಾ ದಂಪತಿ ಪುತ್ರ ಮುಹಮ್ಮದ್ ಮುನ್ಸೀದ್ ( 24) ಮೃತಪಟ್ಟ ವಿದ್ಯಾರ್ಥಿ.
ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಎಂಜೀನಿಯರಿಂಗ್ ವಿದ್ಯಾರ್ಥಿಯಾಗಿದ್ದನು. ಮೂರು ದಿನಗಳ ಹಿಂದೆ ಪರೀಕ್ಷೆಗೆ ಹಾಜರಾಗಲೆಂದು ತೆರಳಿದ್ದನು. ಶುಕ್ರವಾರ ರಾತ್ರಿ ಕೋರಮಂಗಲ ಸಿಗ್ನಲ್ ಬಳಿ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಬೈಕ್ ನಿಂದ ರಸ್ತೆಗೆಸೆ ಯ ಲ್ಪಟ್ಟ ಮುನ್ಸೀದ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಸಹ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಾಹಿತಿ ತಿಳಿದು ಮುನ್ಸೀದ್ ನ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದಾರೆ