ಕಾಸರಗೋಡು, ಸೆ. 19 (DaijiworldNews/SM): ಆರೋಪಗಳನ್ನು ಎದುರಿಸುತ್ತಿರುವ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಹಾಗೂ ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ವಿರುದ್ಧ ಪ್ರತಿಪಕ್ಷ ಪ್ರತಿಭಟನೆಯನ್ನು ಮುಂದುವರಿಸಿದ್ದು, ಶನಿವಾರ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಸರಕಾರಿ ಕಾಲೇಜು ಪರಿಸರದಿಂದ ಹೊರಟ ಪ್ರತಿಭಟನಾ ಜಾಥಾವನ್ನು ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ ಪೊಲೀಸರು ತಡೆದರು. ಪೊಲೀಸ್ ಬ್ಯಾರಿಕೇಡ್ ದೂಡಿ ಮುನ್ನುಗ್ಗಲು ಯತ್ನಿಸಿದ್ದು, ಕೆಲ ಕಾರ್ಯಕರ್ತೆಯರು ಬ್ಯಾರಿಕೇಡ್ ಮೇಲೇರಿ ಘೋಷಣೆ ಕೂಗಿದರು. ಬಳಿಕ ನಡೆದ ಪ್ರತಿಭಟನೆಯನ್ನು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪ್ರಮೀಳಾ ಸಿ. ನಾಯ್ಕ್ ಉದ್ಘಾಟಿಸಿದರು.
ಜಿಲ್ಲಾಧ್ಯಕ್ಷೆ ಎಂ . ಜನನಿ, ಉಪಾಧ್ಯಕ್ಷೆ ರೂಪವಾಣಿ ಆರ್ . ಭಟ್, ಕಾರ್ಯದರ್ಶಿ ಪುಷ್ಪಾ ಅಮೆಕ್ಕಲ, ಸವಿತಾ ಟೀಚರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಉಪಾಧ್ಯಕ್ಷ ಸದಾನಂದ ರೈ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಯಶೋಧಾ ಶ್ರೀಲತಾ, ರತ್ನಾವತಿ, ಸುಕನ್ಯಾ, ಸವಿತಾ, ರಜನಿ ಸಂದೀಪ್ , ಎ . ಸಿಂಧೂ ಮೊದಲಾದವರು ನೇತೃತ್ವ ನೀಡಿದರು.