ಮಂಗಳೂರು, ಸೆ. 19 (DaijiworldNews/SM): ನಟಿ ಕಂ ಆಂಕರ್ ಡ್ರಗ್ ಪಾರ್ಟಿಯಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಡ್ರಗ್ಸ್ ಹಿಂದೆ ಇದ್ದ ಎಲ್ಲರನ್ನು ಪತ್ತೆ ಹಚ್ಚಲಾಗುವುದು ಎಂದಿದ್ದಾರೆ.

ಕಿಶೋರ್ ಜೊತೆ ಹಲವರು ಪಾರ್ಟಿ ಮಾಡಿರುವ ಮಾಹಿತಿ ಇದೆ. ಪಾರ್ಟಿಯಲ್ಲಿ ಯಾರು ಭಾಗಿಯಾಗಿದ್ರು ಪತ್ತೆ ಹಚ್ಚಲಾಗುವುದು. ಯಾರು ಅದನ್ನು ಆಯೋಜನೆ ಮಾಡಿದ್ರು, ಅದರ ಹಿಂದೆ ಯಾರಿದ್ದಾರೆ ಎಲ್ಲರನ್ನು ತನಿಖೆ ನಡೆಸಿ ನಾವು ಪತ್ತೆ ಮಾಡುತ್ತೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣದ ಹಿಂದೆ ಚೈನ್ ಲಿಂಕ್ ಇದೆ. ಮುಂಬೈ ಲಿಂಕ್ ಬಗ್ಗೆ ತನಿಖೆ ವೇಳೆ ಗೊತ್ತಾಗಿದೆ. ಮುಂಬೈ, ಬೆಂಗಳೂರು ಆಗಲಿ ಯಾವುದೇ ಲಿಂಕ್ ಇರಲಿ, ತನಿಖೆ ಮಾಡಿ ಯಾರೆಲ್ಲಾ ಇದ್ದಾರೆ ಅವರೆಲ್ಲರನ್ನೂ ತನಿಖೆಕೆಗೊಳಪಡಿಸುತ್ತೇವೆ. ಮಂಗಳೂರಿನಲ್ಲಿ ಪಾರ್ಟಿ ಆಗಿದ್ರೆ, ಆಯೋಜನೆ ಮಾಡಿದವರು ಅದರ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.