ಮಂಗಳೂರು, ಸೆ. 19 (DaijiworldNews/SM): ಉಡುಪಿಯಲ್ಲಿ ಶನಿವಾರದಂದು 215 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 15098ಕ್ಕೆ ಏರಿಕೆಯಾಗಿದೆ. ಕಾಸರಗೋಡಿನಲ್ಲಿ 191 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಉಡುಪಿ ಜಿಲ್ಲೆಯ ಶನಿವಾರದ ಕೊರೋನಾ ವರದಿ:
ಉಡುಪಿಯಲ್ಲಿ ಶನಿವಾರ 215 ಮಂದಿಯಲ್ಲಿ ಸೋಂಕು
ಒಟ್ಟು ಸೋಂಕಿತರ ಸಂಖ್ಯೆ 15098ಕ್ಕೆ ಏರಿಕೆ
ಮತ್ತೆ 311 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಒಟ್ಟು 13621 ಮಂದಿ ಗುಣಮುಖ
1337 ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ
ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 140ಕ್ಕೇರಿಕೆ
ಕಾಸರಗೋಡು ಜಿಲ್ಲೆಯ ಕೊರೋನಾ ವರದಿ:
ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 191 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 176 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ ಬಂದ 7 ಮತ್ತು ಹೊರರಾಜ್ಯಗಳಿಂದ ಬಂದ 8 ಮಂದಿಗೆ ಸೋಂಕು ಪತ್ತೆಯಾಗಿದೆ. ನಾಲ್ವರು ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿದೆ. 203 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 8196 ಮಂದಿಗೆ ಸೋಂಕು ತಗುಲಿದೆ. 2011 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. 4916 ಮಂದಿ ನಿಗಾದಲ್ಲಿದ್ದಾರೆ. 1268 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.