ಮಂಗಳೂರು, ಸೆ. 20 (DaijiworldNews/MB) : ಪೆರ್ಮನ್ನೂರಿನ ಸೇಂಟ್ ಸೆಬಾಸ್ಟಿಯನ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಎಡ್ವಿನ್ ಮಸ್ಕರೇನ್ಹಸ್ ಸೆಪ್ಟೆಂಬರ್ 20 ರ ಭಾನುವಾರ ಅಲ್ಪಾವಧಿಯ ಅನಾರೋಗ್ಯದಿಂದ ನಿಧನರಾದರು.

57 ವರ್ಷ ಪ್ರಾಯದ ಅವರು, ಜುಲೈ 9, 1963 ರಂದು ಮಾರಿಸ್ ಮತ್ತು ಫಾಸ್ಟೈನ್ ಮಸ್ಕರೇನ್ಹಸ್ ದಂಪತಿಗೆ ಜನಿಸಿದ್ದು ಕೆಲ್ಬೆಟ್ ಮೂಲದವರು. ಅವರು ಮೇ 7, 1991 ರಂದು ಪಾದ್ರಿಯಾಗಿ ನೇಮಕಗೊಂಡರು.
ಪೇತ್ರಿಯ ಪ್ಯಾರಿಷ್ ಪಾದ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಶಿರ್ವಾ, ವಾಮಂಜೂರು, ಬೆಂದೋರ್ ಪ್ಯಾರಿಷ್ಗಳಲ್ಲಿ 1991 ಮತ್ತು 1997 ರ ನಡುವೆ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ ಸೇವೆ ಸಲ್ಲಿಸಿದರು.
1999 ರಲ್ಲಿ ಬೀದರ್ನ ಸೇಂಟ್ ಜೋಸೆಫ್ ಸಂಸ್ಥೆಯ ಮುಖ್ಯ ಶಿಕ್ಷಕರಾಗಿ ನೇಮಕಗೊಂಡರು. ಬಳಿಕ 2001 ರಿಂದ 2003 ರವರೆಗೆ ನಾರವಿಯ ಸೇಂಟ್ ಆಂಟನಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
2005 ರಲ್ಲಿ, ಅವರು ಆನೆಗುಡ್ಡೆಯ ಪ್ಯಾರಿಷ್ ಪಾದ್ರಿಯಾಗಿ ನೇಮಕಗೊಂಡರು. ನಂತರ ಮರಿಯಾಶ್ರಮದ ಪೆರ್ಮನ್ನೂರು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ವಂ. ಫಾ. ಎಡ್ವಿನ್ ಮಸ್ಕರೇನ್ಹಸ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಭಾನುವಾರ ಸಂಜೆ 4 ಗಂಟೆಗೆ ಅವರ ಮನೆ ಪ್ಯಾರಿಷ್ ಕೆಲ್ಂಬೆಟ್ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.