ಮಂಗಳೂರು, ಸೆ. 20 (DaijiworldNews/MB) : ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ನಗರದಲ್ಲಿ ಸ್ಥಾಪಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

ಸಾಂದರ್ಭಿಕ ಚಿತ್ರ
ಸೆಪ್ಟೆಂಬರ್ 19 ರ ಶನಿವಾರ ಬೆಂಗಳೂರಿನ ರಕ್ಷಣಾ ವಕ್ತಾರ (ಪಿಆರ್ಒ) ಈ ವಿಷಯವನ್ನು ಪ್ರಕಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರಿನ ಅವರು, "ಮಂಗಳೂರಿನಲ್ಲಿ ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಯಾಗಲಿದೆ. ಐಸಿಜಿ ಅಕಾಡೆಮಿ ಸ್ಥಾಪಿಸಲು 158 ಎಕರೆ ಕೆಐಎಡಿಬಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಐಸಿಜಿ ಅಧಿಕಾರಿಗಳು, ಸ್ಟೇಕ್ಹೋಲ್ಡರ್ಸ್ಗಳಿಗೆ ವೃತ್ತಿಪರ ಕಡಲ ತರಬೇತಿಯ ಮೈಲಿಗಲ್ಲು " ಎಂದಿದ್ದಾರೆ.
ಆರಂಭದಲ್ಲಿ ಅಕಾಡೆಮಿಯನ್ನು ಕೇರಳದ ಕಣ್ಣೂರಿನ ಆಝೀಕ್ಕಲ್ನಲ್ಲಿ ಸ್ಥಾಪಿಸಬೇಕಿತ್ತು. 2011 ರ ಮೇನಲ್ಲಿ ಅಂದಿನ ರಕ್ಷಣಾ ಸಚಿವ ಎ ಕೆ ಆಂಟನಿ ಈ ಯೋಜನೆಗೆ ಶಿಲಾನ್ಯಾಸ ಮಾಡಿದ್ದರು. ಆದರೆ ಈ ಅದು ಯಾವುದೇ ನಿರ್ಮಾಣಕ್ಕೆ ಅನುಮತಿ ಇಲ್ಲದ ಸಿಆರ್ಝಡ್ - 1 (ಎ) ಪ್ರದೇಶವಾದ್ದ ಕಾರಣ ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಯೋಜನೆಯನ್ನು ನಿರಾಕರಿಸಿತು. ಕಳೆದ ವರ್ಷದವರೆಗೂ ಯಾವುದೇ ಪ್ರಗತಿ ಸಾಧಿಸದ ಕಾರಣ, ಆ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಸ್ಥಳಾಂತರಿಸಲು ನಿರ್ಧರಿಸಿದರು.
ಇನ್ನು ಈ ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಯಾಗಲಿದ್ದು ಹೊಸ ಅಕಾಡೆಮಿ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ವೃತ್ತಿಪರ ತರಬೇತಿಯನ್ನು ನೀಡಲಿದ್ದು ಅವರು ಕರಾವಳಿ ಭದ್ರತೆಯನ್ನು ನಿಭಾಯಿಸಲಿದ್ದಾರೆ. ಪ್ರಸ್ತುತ ಕೇರಳದ ಕೊಚ್ಚಿಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ.