ಮಂಗಳೂರು, ಸೆ. 20 (DaijiworldNews/MB) : ಡ್ರಗ್ಸ್ ಸೇವನೆ ಹಾಗೂ ಸಾಗಾಟ ಆರೋಪದಲ್ಲಿ ಬಂಧನಕೊಳಗಾಗಿರುವ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ವಿಚಾರಣೆ ನಡೆಸಲಾಗಿದ್ದು ಈ ಸಂದರ್ಭ ಕಿಶೋರ್ ತಾನು ಸೇವಿಸುತ್ತಿದ್ದ ಡ್ರಗ್ಸ್ ಬಗ್ಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ.

ತನ್ನ ಆಪ್ತ ಸ್ನೇಹಿತನಿಂದ ಡ್ರಗ್ ಬಗ್ಗೆ ತಿಳಿದುಕೊಂಡ ಕಿಶೋರ್, ಕೊಕೇನ್ ಸೇವಿಸುತ್ತಿದ್ದ. ಎಂ.ಡಿ.ಎಂ.ಎ ಡ್ರಗ್ ಸೇವಸುತ್ತಿರಲಿಲ್ಲ. ಬೇರೆ ಡ್ರಗ್ಸ್ಗಳನ್ನು ಇತರರಿಗಾಗಿ ತರಿಸುತ್ತಿದ್ದು ಅನ್ಲಾಕ್ ಸಂದರ್ಭ 50 ಡ್ರಗ್ಸ್ ಪಿಲ್ಸ್ಗಳನ್ನು ತರಿಸಿರುವುದಾಗಿ ವಿಚಾರಣೆ ಸಂದರ್ಭ ತಿಳಿಸಿದ್ದಾನೆ ಎನ್ನಲಾಗಿದೆ.
ಇನ್ನು ವಿಚಾರಣೆಯ ಸಂದರ್ಭ ಡ್ರಗ್ ಪಾರ್ಟಿ ಬಗ್ಗೆಯೂ ಮಾಹಿತಿ ನೀಡಿರುವ ಕಿಶೋರ್ ಶೆಟ್ಟಿ ಬೆಂಗಳೂರಿನಿಂದ ಎಂಡಿಎಂಎ ಪಿಲ್ಸ್ಗಳನ್ನು ತರಿಸಿದ್ದು 15 ಯುವತಿಯರನ್ನು ಸೇರಿಸಿ ಡ್ರಗ್ ಪಾರ್ಟಿ ಮಾಡುವ ಇರಾದೆಯನ್ನು ಹೊಂದಿದ್ದ. ಆದರೆ ಈ ಪಾರ್ಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ತನಿಖೆಯ ವೇಳೆ ಮಂಗಳೂರಿನಲ್ಲಿ ರೆಸಾರ್ಟ್ ಪಾರ್ಟಿ ವಿಚಾರವು ಬೆಳಕಿಗೆ ಬಂದಿದ್ದು, ಲಾಕ್ಡೌನ್ ಸಂದರ್ಭದಲ್ಲೂ ಕಿಶೋರ್ ಮತ್ತು ಆತನ ಸ್ನೇಹಿತ ಒಂದು ಬಾರಿ ಡ್ರಗ್ ಪಾರ್ಟಿ ಮಾಡಿದ್ದ. ಈ ಪಾರ್ಟಿಯಲ್ಲಿ ಇಬ್ಬರು ಯುವತಿಯನ್ನು ಕರೆಸಲಾಗಿತ್ತು ಎನ್ನಲಾಗಿದೆ. ಈ ಇಬ್ಬರು ಯುವತಿಯರಿಗೂ ಡ್ರಗ್ ಪಿಲ್ಸ್ಗಳನ್ನು ಬೆಂಗಳೂರಿನಿಂದ ಕಿಶೋರ್ ತರಿಸಿಕೊಟ್ಟಿದ್ದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.