ಉಡುಪಿ, ಸೆ. 20 (DaijiworldNews/MB) : ಉಡುಪಿಯಲ್ಲಿ ಸೆಪ್ಟೆಂಬರ್ 19 ಮುಂಜಾನೆ ನಡೆದ ಸರಣಿ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ ಜಿಲ್ಲಾ ಪೋಲಿಸ್ ಇನ್ನಷ್ಟು ತೀವ್ರ ಕಾರ್ಯಚರಣೆ ನಡೆಸಲು ಮುಂದಾಗಿದೆ.

ಸಾಂದರ್ಭಿಕ ಚಿತ್ರ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, "ಉಡುಪಿಯಲ್ಲಿ ಸಾಕಷ್ಟು ಬೀಟ್ ಪೋಲಿಸರಿದ್ದು ಈ ಘಟನೆ ನಡೆದಿರುವುದು ಒಂದು ಸವಾಲು. ಆಯಾಯ ಠಾಣೆಯಲ್ಲಿ ಪ್ರತಿದಿನ ಬೀಟ್ ನಡೆಸುತ್ತಾರೆ. ಈ ರೀತಿ ಪ್ರಕರಣ ಮೊದಲು. ಈಗಾಗಲೇ ದೂರುದಾರರಿಗೆ, ದರೋಡೆಕೋರರ ಚಹರೆ ತಿಳಿಸಲು ಸೂಚಿಸಿದ್ದು ಅವರ ಮುಖಚರ್ಯೆ ಸ್ಕೆಚ್ ಬಿಡಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1400 ಸಿಸಿ ಟಿವಿ ಇದೆ. ಅಲ್ಲದೆ ಪಬ್ಲಿಕ್ ಸೇಪ್ಟಿ ಆಕ್ಟ್ ಪ್ರಕಾರ ನೂರಕ್ಕಿಂತ ಹೆಚ್ಚು ಜನ ಓಡಾಡುವ ಸ್ಥಳದಲ್ಲಿ ಸಿಸಿಟಿವಿ ಹಾಕಲೇ ಬೇಕು ಎನ್ನುವ ನಿಯಮ ಇದೆ. ಖಾಸಗಿ ಅಂಗಡಿಯ ಮುಂದೆ ಈ ಸಿಸಿಟಿವಿ ಅಳವಡಿಸಿದರೆ ಉತ್ತಮ. ಇದನ್ನು ಹಾಕುವುದು ಅಂಗಡಿಯವರ ಜವಾಬ್ದಾರಿಯೂ ಕೂಡ. ಆದಷ್ಟು ಮುಂಜಾನೆ ವಾಕಿಂಗ್, ಜಾಗಿಂಗ್ ಅಂತ ಬರುವ ಮಹಿಳೆಯರು ಚಿನ್ನ ಧರಿಸುವುದನ್ನು ಕಡಿಮೆ ಮಾಡಬೇಕು. ಅಲ್ಲದೇ ಮುಂಜಾನೆ ಯಾರು ಮನೆಯಿಂದ ಹೊರ ಬರುತ್ತಾರೊ ಅವರು ತಮ್ಮ ಮನೆಯವರಿಗೆ ತಾವೆಲ್ಲಿ ವ್ಯಾಯಾಮಕ್ಕೆ ಹೋಗುತ್ತೇವೆ ಎನ್ನುವುದನ್ನು ಮನೆಯಿಂದ ತೆರಳುವ ಮುನ್ನವೇ ತಿಳಿಸಬೇಕು. ದರೋಡೆ ಬೆದರಿಕೆ ಆದ ಸಂದರ್ಭದಲ್ಲಿ ಯಾರು ಹೆದರಬಾರದು, ಆದಷ್ಟು ವಾಹನದ ನಂಬರ್, ಕಲರ್, ವ್ಯಕ್ತಿಯ ಚಹರೆ, ಡ್ರೆಸ್ ಕಲರ್ ಡಿಸೈನ್, ಬೈಕ್ ಇದನ್ನು ಗುರುತಿಟ್ಡುಕೊಳ್ಳಬೇಕು. ಘಟನೆ ನಡೆದ ಕೂಡಲೇ ಆಯಾ ಠಾಣೆಯ ಬೀಟ್ ಪೋಲಿಸರಿಗೆ ತಿಳಿಸಿದರೆ ಬಹಳಷ್ಟು ಪ್ರಯೋಜನವಾಗುತ್ತದೆ. ದೂರು ನೀಡುವಲ್ಲಿ ತಡವಾದರೆ ಕಳ್ಳರನ್ನು ಪತ್ತೆ ಹಚ್ಚಲು ಕಷ್ಟವಾಗುತ್ತದೆ. ಅಥವಾ ತಕ್ಷಣ 100 ಗೆ ಕಾಲ್ ಮಾಡಿ ವಿಷಯ ತಿಳಿಸ ತಕ್ಕದ್ದು ಎಂದು ದಾಯ್ಜಿವಲ್ಡ್ಗೆ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕುಮಾರ ಚಂದ್ರ ಈ ಬಗ್ಗೆ ಪ್ರತಿಕ್ರಿಯಿಸಿ, 'ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ಮಾರ್ನಿಂಗ್ ಬೀಟನ್ನು ಎಲ್ಲಾ ಕಡೆಯೂ ನಡೆಸಲಾಗುತ್ತದೆ. ಜಿಲ್ಲೆಗೆ ಓರ್ವ ನೋಡಲ್ ಅಧಿಕಾರಿ ಇದ್ದು ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಇನ್ ಸ್ಪೆಕ್ಟರ್ಸ್ ಗಳು ಮಾನಿಟರ್ ಮಾಡುತ್ತಾರೆ. ಜಿಲ್ಲೆಯಲ್ಲಿ ಒಟ್ಟು ೩ ಸಬ್ ಡಿವಿಷನ್ ಇದ್ದು, ಆರು ಸರ್ಕಲ್ ವಿಭಾಗವಿದೆ.
ಜಿಲ್ಲೆಯಲ್ಲಿ ಒಟ್ಟು 22 ಚೆಕ್ ಪೋಸ್ಟ್ ಗಳು, ಅದರಲ್ಲಿ ಹೊಸಂಗಡಿ, ಹೆಬ್ರಿ ಉರ್ಕೇರಿ ಜಂಕ್ಷನ್, ಹೆಜಮಾಡಿ ಮತ್ತು ಸೋಮೇಶ್ವರ ಸೇರಿದಂತೆ ಒಟ್ಟು ಆರು ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳಿದ್ದರೆ, ಉಳಿದವು ಶಾಸ್ತ್ರಿ ಪಾರ್ಕ್, ಸಂಗಮ್, ಕಂಡ್ಲೂರು, ಗುಲ್ವಾಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟು 24 ಸ್ಟೇಷನ್ ಗಳಿದ್ದು ಪ್ರತಿದಿನ ರಾತ್ರಿ ಪಾಳಯ ನಡೆಸಲಾಗುತ್ತದೆ.
6- ಹೊಯ್ಸಳ, 6- ಎಸ್ ಒ (SOs), ಗಸ್ತು ತಿರುಗುತ್ತವೆ. 8 - ಹೈವೆ ಪ್ಯಾಟ್ರೋಲ್ ವಾಹನಗಳು ಹಗಲು ರಾತ್ರಿ ಗಸ್ತು ತಿರುಗುತ್ತದೆ. ನಗರದಲ್ಲಿ ನಾಲ್ಕು ಬೀಟ್, ಇಬ್ಬರು ಪೋಲಿಸರು ನಡೆಸುತ್ತಾರೆ. ಜಿಲ್ಲೆಯಲ್ಲಿ ಒಟ್ಟು 115 ಪೋಲಿಸ್ ಸಿಸಿಟಿವಿ ಕಣ್ಗಾವಲಾಗಿ ಕೆಲಸ ನಿರ್ವಹಿಸುತ್ತದೆ. ಅಲ್ಲದೆ ಒಟ್ಟು ೮ ಇಆರ್ ವಿಎಸ್ (Emergency Response vehicle system) ವಾಹನಗಳು ಪ್ರತಿ ತಾಲೂಕಿಗೆ ಒಂದರಂತೆ ಕೆಲಸ ನಡೆಸುತ್ತಿದೆ.
ಇಷ್ಟಲ್ಲದೆ ಪ್ರತಿ ವಾರ, ಸಂಚಾರ ನಿಯಮ ದ ಪಾಲನೆ ಮಾಡಲು ಸ್ಪೆಷಲ್ ಡ್ರೈವ್ ಗಳನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಖಾಸಗಿ ಬಿಲ್ಡಿಂಗ್ ಶಾಪ್ ಮಾಲಕರು ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಇದು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. ಹೀಗಿದ್ದರೂ ಕೆಲವೊಮ್ಮೆ ಪೋಲಿಸರ ಕಣ್ಣು ತಪ್ಪಿಸಿ ದರೋಡೆ, ಅಪರಾಧ ಗಳು ನಡೆಯುತ್ತವೆ. ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಜನರ ಹಿತದೃಷ್ಟಿಯಿಂದ ಉತ್ತಮ ಸೇವೆ ಕೊಡಲು ಒತ್ತು ನೀಡುತ್ತೇವೆ.ಕರಾವಳಿಯಲ್ಲಿ ಪೋಲಿಸ್ ಇಲಾಖೆಗೆ ಸೇರುವವರ ಸಂಖ್ಯೆ ಕಡಿಮೆ. ಬೇರೆ ಜಿಲ್ಲೆಯ ಯುವಕರು ಇಲ್ಲಿ ಐದು ವರ್ಷ ತರಬೇತಿ ಪಡೆದು ನಂತರ ಎನ್ ಒಸಿ ಪಡೆದು ತಮ್ಮ ಜಿಲ್ಲೆಯಲ್ಲಿ ಸೇವೆ ಮಾಡುತ್ತಾರೆ. ಆಗ ಮತ್ತೆ ಸಿಬ್ಬಂದಿಯ ಕೊರತೆ ಆಗುತ್ತದೆ. ಇದು ಹೀಗೆ ಮುಂದು ವರಿಯುತ್ತದೆ.
ಇಷ್ಟೆಲ್ಲಾ ಮುಂಜಾಗ್ರತೆ ತೆಗೆದುಕೊಡರು ಕೂಡ ಜನರ ತುಂಬಾ ತಡವಾಗಿ ಸ್ಟೇಷನ್ ಗೆ ಬಂದು ದೂರುಕೊಡುಸುಲಭವಾಗುತ್ತದೆ.ಗಿ ಕಳ್ಳರು ತಪ್ಪಿಸಿಕೊಳ್ಳಲು ದಾರಿ ಮಾಡಿಕೊಟ್ಟಾಂತಾಗುತ್ತದೆ. ಜನರು ಇನ್ನಷ್ಟು ಜಾಗ್ರತರಾಗಬೇಕು. ಇಂತಹ ಘಟನೆ ನಡದಾಗ ಹತ್ತಿರದ ಸ್ಟೇಷನ್ ಕುಡಲೆ ತಿಳಿದಾಗ ತಿಳಿಸಬೇಕು. ಆಗ ಮಾತ್ರ ಕಳ್ಳರನ್ನು ಹಿಡಿಯಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಮತ್ತಷ್ಟು ಸಕ್ರಿಯ ವಾಗಿ ಕೆಲಸ ಮಾಡುತ್ತದೆ.