ಕಾಸರಗೋಡು, ಸೆ. 20 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರವಿವಾರ 208 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದೆ.

ಇಂದಿನ ಸೋಂಕಿತರ ಪೈಕಿ 203 ಮಂದಿಗೆ ಸಂಪರ್ಕದಿಂದ ಹಾಗೂ ವಿದೇಶದಿಂದ ಬಂದ ಇಬ್ಬರು, ಹೊರರಾಜ್ಯಗಳಿಂದ ಆಗಮಿಸಿದ ಮೂವರಿಗೆ ಸೋಂಕು ದೃಢಪಟ್ಟಿದೆ. 173 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ದ್ರಢಪಟ್ಟಿದೆ. ಇದುವರೆಗೆ 8404 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 663 ಮಂದಿ ವಿದೇಶಗಳಿಂದ 493 ಮಂದಿ ಹೊರ ರಾಜ್ಯಗಳಿಂದ ಮರಳಿದವರಾಗಿದ್ದಾರೆ.
7248 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 6292 ಮಂದಿ ಗುಣಮುಖರಾಗಿದ್ದಾರೆ. 2046 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 833 ಮಂದಿ ಮನೆಗಳಲ್ಲೇ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 66 ಮಂದಿ ಮೃತಪಟ್ಟಿದ್ದಾರೆ.
4894 ಮಂದಿ ನಿಗಾದಲ್ಲಿದ್ದಾರೆ. 1275 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.