ಮಂಗಳೂರು, ಸೆ. 20 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿರಂತರ ಹೆಚ್ಚಳವಾಗುತ್ತಿದ್ದು, ರವಿವಾರದಂದು ಮತ್ತೆ 380 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರ ದಾಟಿದೆ.

ರವಿವಾರದಂದು ದ.ಕ. ಜಿಲ್ಲೆಯಲ್ಲಿ 127 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 139 ಮಂದಿಯಲ್ಲಿ ಐಎಲ್ ಐ ಕೇಸ್ ದೃಢಪಟ್ಟಿದೆ. 8 ಮಂದಿಯಲ್ಲಿ ಸಾರಿ ಕೇಸ್ ಪತ್ತೆಯಾಗಿದ್ದು, 106 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ದ.ಕ. ಜಿಲ್ಲೆಯ ರವಿವಾರದ ಕೊರೋನಾ ವರದಿ:
ದ.ಕ.ದಲ್ಲಿ ರವಿವಾರ 380 ಮಂದಿಗೆ ಪಾಸಿಟಿವ್
ಜಿಲ್ಲೆಯಲ್ಲಿ ರವಿವಾರ 353 ಮಂದಿ ಗುಣಮುಖ
ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು 138188
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣ 118054
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಕೇಸ್ 20134
ರವಿವಾರದಂದು ಮತ್ತೆ 6 ಮಂದಿ ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆಯಲ್ಲಿರುವವರು- 4550
ಒಟ್ಟು ಗುಣಮುಖರಾಗಿ ಬಿಡುಗಡೆ-15101 ಮಂದಿ
ಒಟ್ಟು ಕೊರೋನಾ ಸಾವು-482