ಮೇ, 10 : ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬುಡಕಟ್ಟು ಸಮುದಾಯ ಹೆಚ್ಚು ವಾಸವಿರುವ ಎಂಟು ಜಿಲ್ಲೆಗಳಲ್ಲಿ, ಸಾಂಪ್ರದಾಯಿಕ ಕೇಂದ್ರ ಮತಗಟ್ಟೆಗಳನ್ನು ತೆರೆಯಲಾಗಿದೆ. ಬುಡಕಟ್ಟು ಸಮುದಾಯ ಮತ ಚಲಾಯಿಸಲು ಈ ಸಾಂಪ್ರದಾಯಿಕ ಕೇಂದ್ರಗಳಿಗೆ ತೆರಳಬಹುದಾಗಿದ್ದು, ಈ ಮತಗಟ್ಟೆಗಳನ್ನು ಸಂಪ್ರದಾಯಿಕವಾಗಿ ವಿನ್ಯಾಸಗೊಳಿಸಲಾಗಿದೆ. ಬುಡಕಟ್ಟು ಜನಾಂಗ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಿ ಮತ ಚಲಾಯಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಎಥ್ನಿಕ್ ಬೂತ್ ಗಳನ್ನು ತೆರೆಯಲಾಗಿದೆ. ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಮತದಾರರ ಸಂಖ್ಯೆಯು 5,15,190ರಷ್ಟಿದೆ. ಇದರಲ್ಲಿ 2,58,395 ಮಹಿಳೆಯರು, 2,56,795 ಪುರುಷರು ಸೇರಿದ್ದಾರೆ.