ಉಡುಪಿ, ಸೆ. 21 (DaijiworldNews/MB) : ಕೊರೊನಾದಿಂದ ತತ್ತರಿಸಿ ಹೋಗಿದ್ದ ಉಡುಪಿ ಇದೀಗ ಸತತ 24 ಗಂಟೆ ಧಾರಾಕಾರವಾಗಿ ಸುರಿದ ಮಳೆಗೆ ಇನ್ನಷ್ಟು ತೊಂದರೆಗೆ ಈಡಾಗಿದೆ.

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ತಮ್ಮ ಮನೆಯನ್ನು ಸ್ಥಳಾಂತರ ಮಾಡಿರಲಿಲ್ಲ. ಇದರಿಂದ ಪರಿಸ್ಥಿತಿ ವಿಕೋಪಕ್ಜೆ ತಲುಪಿತು. ಉಡುಪಿಯ ತಗ್ಗು ಪ್ರದೇಶಗಳಲ್ಲಿ ನೀರು ಉಕ್ಕೇರಿ ಜನರು ಮನೆಯಿಂದ ಹೊರ ಬರಲಾರದೆ ಪ್ರಾಯಸ ಪಡುವಂತಾಯಿತು. ಇದನ್ನು ಜಿಲ್ಲಾಡಳಿತ ವೈಫಲ್ಯ ಎಂದು ಜನಾಕ್ರೋಶ ಹೊರ ಹಾಕಿದ್ದಾರೆ.
ಉಡುಪಿಗೆ 25 ಮಂದಿ ಸಿಬ್ಬಂದಿ ಇರುವ ಒಂದು ಟೀಮ್ ಮಂಗಳೂರಿನ ಬಂದಿದ್ದು, ಮೈಸೂರಿನಿಂದ ಇನ್ನೊಂದು ತಂಡ ಬರುವುದಕ್ಕೆ ಕಾಯುತ್ತಿದೆ ಜಿಲ್ಲಾಡಳಿತ.
ಜಿಲ್ಲೆಯಲ್ಲಿ ಬರೋಬ್ಬರಿ 315.3 ಮಿಲಿ. ಮೀಟರ್ ಕೆವಲ ಉಡುಪಿ ತಾಲೂಕಿನಲ್ಲಿ ದಾಖಲೆಯ ಮಳೆಯಾಗಿದೆ. ಉಡುಪಿಯ ಸ್ವರ್ಣ, ಸೀತ, ಮಡಿಸಾಲು, ಉದ್ಯಾವರ, ಶಾಂಭವಿ, ಇಂದ್ರಾಣಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಸರಾಸರಿ 197 ಮಿ.ಮಿ ಮಳೆದಾಖಲೆಯಾಗಿದೆ. ಸುಮಾರು 40 ವರ್ಷದ ಬಳಿಕ ಈ ರೀತಿಯಾಗಿ ದಾಖಲೆ ಯ ರೀತಿಯಲ್ಲಿ ಬಳೆ ಬಂದಿದೆ.
ಅಪಾಯದ ಮಟ್ಟ ಮೀರಿದ ಬಜೆ ಡ್ಯಾಮ್ - ಕೆಟ್ಟು ನಿಂತ ಪಂಪ್
ಇನ್ನು ಬಜೆ ಡ್ಯಾಮ್ ನಲ್ಲಿ ಅಪಾಯದ ಮಟ್ಟ ಮೀರಿ ನಿಂತಿದೆ. ಇದರ ಸಾಮಾರ್ಥ್ಯ 5 ಮೀಟರ್ ಆಗಿದ್ದರೂ ಧಾರಕಾರ ಮಳೆಯಿಂದ 10 ಮೀಟರ್ ಬಂದು ತಲುಪಿದೆ. ಇನ್ನೊಂದು ಕಡೆ ನೀರಿನ ಒಳಹರಿವಿನಿಂದ ಪಂಪ್ ಕಾರ್ಯ ಸ್ಥಗಿತವಾಗಿದೆ. ಸುತ್ತ ಮುತ್ತಲ ಪ್ರದೇಶದ ಜನರನ್ನು ತಡರಾತ್ರಿಯೇ ಶಿಪ್ಟ್ ಮಾಡಲಾಗಿತ್ತು ಎಂದು, ನಗರಸಭೆಯ ಇಂಜಿನಿಯರ್ ಮೋಹನ್ ರಾಜ್ ತಿಳಿಸಿದ್ದಾರೆ.
ನಗರದಲ್ಲಿ ಮಳೆಗೆ ಚರಂಡಿಯಿಂದ ಹೂಳೆತ್ತಿದ್ದರೂ ಹೊಳೆಗಳು ಭರ್ತಿಯಾಗಿವೆ. ಈ ಬಾರಿ ಮೇ 20 ರಿಂದ ಮಳೆ ಆರಂಭವಾಗಿತ್ತು.
ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆಯೇ?
ಜಿಲ್ಲೆಯಿಡಿ ರೆಡ್ ಅಲರ್ಟ್ ಘೋಷಣೆ ಆಗಿದ್ದರು, ಗಂಭೀರವಾಗಿ ತೆಗೆದು ಕೊಳ್ಳದಿರುವುದರಿಂದ ಇಂತಹ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಏಳು ತಹಶಿಲ್ದಾರರಿದ್ದು, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ, ಪ್ರಕೃತಿ ವಿಕೋಪ ನಿರ್ವಹಣೆ ಸಮಿತಿ ಕೂಡ ಇದೆ. ಜಿಲ್ಲಾಡಳಿತ ದ ಪೂರ್ವ ತಯಾರಿಯಲ್ಲಿ ಸಾಕಷ್ಟು ಎಡವಿದೆ. ಈ ಸಮಿತಿಯಿಂದ ಪ್ರಕೃತಿ ವಿಕೋಪದ ಬಗ್ಗೆ ಸಭೆಗಳು ನಡೆಯಬೇಕಿತ್ತು. ಆದರೆ ಯಾವುದೇ ಅಲ್ಲಲ್ಲಿ ಸಭೆಗಳು ಗ್ರಾಮ ಮಟ್ಟದಲ್ಲಿ ಆಗಿವೆ ಬಿಟ್ಟರೆ ಸಮರ್ಪಕವಾಗಿ ಯಾವುದೇ ಸಭೆ ನಡೆಸಿಲ್ಲ ಎನ್ನುವುದು ಕೆಲವರ ಅಭಿಪ್ರಾಯ.
ನೆರೆ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಎಚ್ಚರಿಕೆ ಕೊಟ್ಟಿದ್ದರೂ ಜನರು ಕೊನೆಯ ಕ್ಷಣದಲಿ ಮನೆ ಬಿಡುತ್ತಾರೆ. ಏಕಾಏಕಿ ನುಗ್ಗಿ ದ ಪ್ರವಾಹ ದಿಂದ ಜನರು ಕಂಗಾಲಾಗಿದ್ದಾರೆ. ಬ್ರಹ್ಮಾವರ ತಾಲೂಕಿನಲ್ಲಿ ಹೇರೂರು, ಬೈಕಾಡಿ,ಆರೂರು ಮೂರು ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ. ಆದರೂ ಜನರು ಸಹಕಾರ ನೀಡುತ್ತಿಲ್ಲ. ಸಂಬಂಧಿಕರ ಮನೆಗೆ ಹೋಗುತ್ತಾರೆ. ರಾತ್ರಿ 11 ರಿಂದ ಆರಂಭವಾದ ಕಾರ್ಯಚರಣೆ ಈಗಲೂ ನಿಂತಿಲ್ಲ ಎಂದು ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೊರಯ್ಯ ಅಲವತ್ತು ಕೊಂಡಿದ್ದಾರೆ.
ಇನ್ನಾದರೂ ಎಚ್ಚೆತ್ತುಕೊಳ್ಳಲಿ ಜಿಲ್ಲಾಡಳಿತ
ಉಡುಪಿಯಲ್ಲಿ ಉಸ್ತುವಾರಿ ಮಂತ್ರಿಯವರ ಅನುಪಸ್ಥಿತಿ ತುಂಬಾ ತೊಡಕುಂಟು ಮಾಡಿದೆ. ಒಂದು ಕಡೆ ಕೊರೋನಾ ಇನ್ನೊಂದು ಕಡೆ ಕೃತಕ ಮಳೆ. ಎಲ್ಲವನ್ನು ಡಿಸಿಯವರೇ ಉಸ್ತುವಾರಿ ಮಾಡುವ ಪರಿಸ್ಥಿತಿ. ಹಾಗಾಗಿ ಜಿಲ್ಲೆಯವರೇ ಉಸ್ತುವಾರಿ ಆಗಿದ್ದರೆ ಬಹುಶಃ ಹೆಚ್ಚು ಪ್ರಯೋಜನಕಾರಿ ಎನ್ನುವುದು ಜನರ ಅಭಿಪ್ರಾಯ.
ಪ್ರಕೃತಿ ವಿಕೋಪ ಸಮಿತಿ ಸಭೆ ನಡೆದಿದ್ದೇ ಆಗಿದ್ದರೆ ಉಡುಪಿ, ಕಾಪು ಬ್ರಹ್ಮಾವರದ ಪ್ರದೇಶಗಳು ಮುಳುಗಡೆ, ಎನ್ ಡಿ ಆರ್ ಎಪ್ ಟೀಮ್ ಇಲ್ಕದೆ ಜನರು ಪರದಾಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಹವಾಮಾನ ವರದಿ ಪ್ರಕಾರ, ಸೆ.28 ರವರಗೂ ಜಡಿ ಮಳೆ ಮುಂದುವರಿಯಲ್ಲಿದ್ದು ಜಿಲ್ಲಾಡಳಿತ ಇನ್ನಷ್ಟು ಗಂಭೀರವಾಗಿ ಕೆಲಸ ಮಾಡಲಿ ಎಂದು ಪ್ರವಾಹ ಪೀಡಿತ ಪ್ರದೇಶದ ಜನರ ಒತ್ತಾಯ.