ಮಂಗಳೂರು,ಸೆ. 22(DaijiworldNews/HR): ಡ್ರಗ್ಸ್ ಸಾಗಣೆ ಹಾಗೂ ಸೇವನೆ ಆರೋಪದಲ್ಲಿ ಶನಿವಾರ ಬಂಧಿಸಲ್ಪಟ್ಟಿದ್ದ ಡ್ಯಾನ್ಸರ್, ನೃತ್ಯ ಸಂಯೋಜಕ ಕಿಶೋರ್ ಅಮಾನ್ ಶೆಟ್ಟಿ(30)ನನ್ನು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದೀಗ ಆತನೊಂದಿಗೆ ಡ್ರಗ್ಸ್ ಪಾರ್ಟಿ ಮಾಡಿದ್ದ ಯುವತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಣಿಪುರಿ ಮೂಲದ ಆಸ್ಕಾ ಎಂದು ಗುರುತಿಸಲಾಗಿದೆ.
ಆಸ್ಕಾ ಮಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಪೊಲೀಸರು ಬಂಧಿಸಿದ ಯುವತಿಯನ್ನು ಡ್ರಗ್ಸ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿರುವುದು ವರದಿಯಾಗಿದೆ.
ಬಂಧನಕ್ಕೊಳಗಾದ ಯುವತಿ ಆಸ್ಕಾ ಕಿಶೋರ್ ಅಮನ್ ಗರ್ಲ್ ಫ್ರೆಂಡ್ ಎಂದು ತಿಳಿದು ಬಂದಿದ್ದು, ಆಕೆಯ ಸ್ನೇಹಿತೆಯರು ಕೂಡ ಡ್ರಗ್ ಪಾರ್ಟಿ ಗೆ ಬರುತ್ತಿದ್ದ ಹಿನ್ನಲೆಯಲ್ಲಿ ಅವರಿಗೂ ನೋಟಿಸನ್ನು ನೀಡಲು ಪೊಲೀಸರು ಮುಂದಾಗಿದ್ದಾರೆ.
ಇನ್ನು ಕಿಶೋರ್ ನನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.