ಉಡುಪಿ, ಸೆ. 22 (DaijiworldNews/MB) : ಖಾಸಗಿ ಅಪಾರ್ಟ್ಮೆಂಟ್ ಒಂದರ ತಡೆಗೋಡೆ ಕುಸಿದು ಅಪಾಯದ ಹಂತದಲ್ಲಿದ್ದ ಮಣಿಪಾಲದ ಅಪಾರ್ಟ್ಮೆಂಟ್ಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಂಗಳವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಖಾಸಗಿ ಅಪಾರ್ಟ್ ಮೆಂಟ್ ನ ತಡೆಗೋಡೆ ಕುಸಿದು ಕಟ್ಟಡ ಅಪಾಯದ ಹಂತದಲ್ಲಿತ್ತು. ಸ್ಥಳ ಪರೀಶೀಲನೆ ನಡೆಸಿರುವ ಜಿಲ್ಲಾಧಿಕಾರಿಗಳು ಕಟ್ಟಡದ ಭದ್ರತೆ ಮತ್ತು ಕಾಗದ ಪತ್ರಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮಣಿಪಾಲದ ಕುಂಟಲಕಾಡು ಎಂಬಲ್ಲಿರುವ ಈ ಕಟ್ಟಡವು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡದ ತಡೆಗೋಡೆ ಸೋಮವಾರ ಸಂಜೆಯ ವೇಳೆಗೆ ಚರಂಡಿ ಸಮೇತ ಕುಸಿದು ಬಿದ್ದಿತ್ತು. ತಕ್ಷಣವೇ ಕಾರ್ಯಪ್ರವರ್ತರಾದ ಜಿಲ್ಲಾಡಳಿತ ಕಟ್ಟಡದ ನಿವಾಸಿಗಳನ್ನು ತಕ್ಷಣವೇ ಮನೆ ಖಾಲಿ ಮಾಡಲು ನೋಟಿಸ್ ನೀಡಿತ್ತು. ಜೊತೆಗೆ ಕಟ್ಟಡದ ಪಕ್ಕದಲ್ಲೇ ಹಾದು ಹೋಗುವ ಉಡುಪಿ - ಆಗುಂಬೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಏಕ ಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು.