ಕಾಸರಗೋಡು, ಸೆ. 22 (DaijiworldNews/SM): ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ರನ್ನು ಶೀಘ್ರ ಕ್ರೈಂ ಬ್ರಾಂಚ್ ವಿಚಾರಣೆ ನಡೆಸಲಿದೆ.

ರಾಜ್ಯ ಕ್ರೈಂ ಬ್ರಾಂಚ್ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಲಭಿಸಿರುವ ದೂರುಗಳ ಪರಿಶೀಲನೆ ನಡೆಸಿದೆ. ಚಂದೇರ, ಕಾಸರಗೋಡು ಹಾಗೂ ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ೫೦ ರಷ್ಟು ದೂರುಗಳು ಲಭಿಸಿವೆ.
ಎಂ.ಸಿ. ಖಮರುದ್ದೀನ್ ಅಧ್ಯಕ್ಷರಾಗಿರುವ ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿಗೆ ಸುಮಾರು 700ರಷ್ಟು ಮಂದಿಯಿಂದ ಠೇವಣಿ ಪಡೆಯಲಾಗಿದ್ದು, ಇದೀಗ ಜ್ಯುವೆಲ್ಲರಿಗಳು ಮುಚ್ಚಿರುವುದರಿಂದ ಠೇವಣಿ ಹಣ ಮರಳಿಸದಿರುವುದರಿಂದ ಗ್ರಾಹಕರು ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಲೇರಿದ್ದಾರೆ.
ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿದ್ದು, ಶಾಸಕ ಹಾಗೂ ಕಂಪೆನಿಯ ನಿರ್ದೇಶಕರುಗಳನ್ನು ವಿಚಾರಣೆಗೊಳಪಡಿಸಲು ಕ್ರೈಂ ಬ್ರಾಂಚ್ ಮುಂದಾಗಿದೆ.