ಮಂಗಳೂರು, ಸೆ. 22 (DaijiworldNews/SM): ದ.ಕ. ಜಿಲ್ಲೆಯಲ್ಲಿ ಸೋಮವಾರ 209 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20578ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ 94 ಐಎಲ್ ಐ ಪ್ರಕರಣಗಳಾಗಿವೆ. 61 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 12 ಮಂದಿಯಲ್ಲಿ ಸಾರಿ ಕೇಸ್ ಪತ್ತೆಯಾಗಿದೆ. ಇನ್ನುಳಿದಂತೆ 44 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದಿನ ಸೋಂಕಿತರ ಪೈಕಿ 111 ಮಂದಿ ಮಂಗಳೂರು ತಾಲೂಕಿನವರಾಗಿದ್ದಾರೆ.
ದ.ಕ. ಜಿಲ್ಲೆಯ ಮಂಗಳವಾರದ ಕೊರೋನಾ ವರದಿ:
ಒಟ್ಟು ಪರೀಕ್ಷೆಗೊಳಪಟ್ಟವರು-141523
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ಪ್ರಕರಣಗಳು-120945
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-20578
ಮಂಗಳಾವಾರದಂದು ಪತ್ತೆಯಾದ ಪಾಸಿಟಿವ್ ಕೇಸ್ ಗಳು-211
ಇಂದು ಜಿಲ್ಲೆಯಲ್ಲಿ ಗುಣಮುಖರಾದವರು- 209 ಮಂದಿ
ಇಂದು ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರು-4 ಮಂದಿ
ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು-4369 ಮಂದಿ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರು- 15714
ಜಿಲ್ಲೆಯಲ್ಲಿ ಒಟ್ಟು ಕೊರೋನಾಗೆ ಬಲಿಯಾದವರು-494 ಮಂದಿ
ಕಾಸರಗೋಡು ಜಿಲ್ಲೆಯಲ್ಲಿ 197 ಮಂದಿಗೆ ಕೊರೊನಾ ಪಾಸಿಟಿವ್:
ಕಾಸರಗೋಡು 197 ಮಂದಿಗೆ ಕೊರೊನಾ ದೃಢ
191 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆ
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8711ಕ್ಕೆ ಏರಿಕೆ
ಸದ್ಯ ಜಿಲ್ಲೆಯಲ್ಲಿ 1947 ಮಂದಿ ಚಿಕಿತ್ಸೆಯಲ್ಲಿ
ಸೆ.22ರಂದು 225 ಮಂದಿ ಗುಣಮುಖರಾಗಿ ಬಿಡುಗಡೆ