ಮಂಗಳೂರು, ಸೆ. 22 (DaijiworldNews/SM): ದ.ಕ. ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕಗೊಳಿಸಿ ಆದೇಶ ನೀಡಲಾಗಿದೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಮಾಧ್ಯಮಗಳಲ್ಲಿ ಪಕ್ಷದ ವಿಚಾರಗಳು ಹಾಗೂ ದೃಷ್ಥಿಕೋನಗಳು ಪರಿಣಾಮಕಾರಿಯಾಗಿ ಬಿಂಬಿತಗೊಳ್ಳಬೇಕು. ಇದಕ್ಕೆ ಉತ್ತಮ ತಿಳುವಳಿಕೆ ಹಾಗೂ ಅನುಭವದ ಅಗತ್ಯವಿದ್ದು, ಯು.ಟಿ. ಖಾದರ್ ಇದನ್ನು ಹೊಂದಿದ್ದಾರೆ. ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮಾರ್ಥ್ಯ ಹೊಂದಿರುವ ಕಾರಣದಿಂದಾಗಿ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕಗೊಳಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಪತ್ರಮುಖೇನ ತಿಳಿಸಿದ್ದಾರೆ.
ಇನ್ನು ದ.ಕ. ಜಿಲ್ಲೆಯಲ್ಲಿ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿನ ವಿಷಯಗಳ ಬಗ್ಗೆ ಮಾಹಿತಿಯನ್ನು ಹೊಂದಿದ್ದು, ತಕ್ಷಣಕ್ಕೆ ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.