ಮಂಗಳೂರು, ಸೆ. 23 (DaijiworldNews/MB) : ಬಾವುಟಗುಡ್ಡೆ ರಸ್ತೆಯೆಂದು ಸ್ಥಳೀಯರಿಂದ ಕರೆಯಲ್ಪಡುವ ಲೈಟ್ ಹೌಸ್ ಹಿಲ್ ರಸ್ತೆಯನ್ನು ಸೆಪ್ಟೆಂಬರ್ 23 ರ ಬುಧವಾರ ಅಧಿಕೃತವಾಗಿ ವಿಜಯ ಬ್ಯಾಂಕ್ನ ಮಾರ್ಗದರ್ಶಕರು ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸಿದ 'ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರಿನಲ್ಲಿ 'ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ' ಎಂದು ಮರುನಾಮಕರಣ ಮಾಡಲಾಯಿತು.






ಅಂಬೇಡ್ಕರ್ ಸರ್ಕಲ್ನಿಂದ ಕೆಥೋಲಿಕ್ ಕ್ಲಬ್ಗೆ ಲೈಟ್ ಹೌಸ್ ಹಿಲ್ ಮೂಲಕ ಹೋಗುವ ರಸ್ತೆಯನ್ನು ಇನ್ನು ಮುಂದೆ 'ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ' ಎಂದು ಕರೆಯಲಾಗುತ್ತದೆ.
ಬುಧವಾರ ಬೆಳಿಗ್ಗೆ 9 ಗಂಟೆಗೆ ಭಾವುಟ ಗುಡ್ಡೆಯ ಸಿಂಡಿಕೇಟ್ ಬ್ಯಾಂಕಿನ ಸಮೀಪದಲ್ಲಿ ನಡೆದ ಈ ಮರುನಾಮಕರಣ ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ನಗರದ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಈ ರಸ್ತೆಯನ್ನು ಅಧಿಕೃತವಾಗಿ ಪ್ರಸಿದ್ಧ ಬ್ಯಾಂಕರ್ ಹೆಸರಿನಲ್ಲಿ ನಾಮಕರಣ ಮಾಡಿದ್ದಾರೆ.
ಈ ರಸ್ತೆಯನ್ನು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಇಲ್ಲಿನ ನಗರ ಪಾಲಿಕೆಯು ಅಂಗೀಕರಿಸಿದ್ದು ಆಕ್ಷೇಪಣೆಗಳು ವ್ಯಕ್ತವಾದ ಕಾರಣ ಹೈಕೋರ್ಟ್ ಮೇ 24, 2017 ರಂದು ತಡೆಯಾಜ್ಞೆ ನೀಡಿತ್ತು. ಪರ ವಿರೋಧಗಳ ವಾದಗಳು ಮತ್ತು ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರ ತನ್ನ ಹಿಂದಿನ ನಿರ್ಧಾರವನ್ನು ಪರಿಶೀಲಿಸಲು ಮತ್ತು ಈ ವಿಷಯದಲ್ಲಿ ಸೂಕ್ತ ನಿಲುವನ್ನು ತೆಗೆದುಕೊಳ್ಳಲು ಆದೇಶಿಸಿತ್ತು. ನಗರ ಪಾಲಿಕೆ ಆಯುಕ್ತರಿಗೆ ಈ ಹಿಂದಿನ ತೀರ್ಮಾನದ ಬಗ್ಗೆ ಜನರಿಂದ ಬಂದಿರುವ ಆಕ್ಷೇಪ ಮೇಲ್ಮನವಿ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿತ್ತು. ಇದನ್ನು ಪರಿಶೀಲಿಸಿದ ಆಯುಕ್ತರು ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸರ್ಕಾರವು ಇತ್ತೀಚೆಗೆ ತಡೆಯಾಜ್ಞೆಯನ್ನು ಹಿಂಪಡೆದಿದ್ದು ರಸ್ತೆಗೆ 'ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ' ಎಂದು ಮರುನಾಮಕರಣ ಮಾಡಲು ಅನುಮತಿ ನೀಡಿತ್ತು.
ವಿಜಯ ಬ್ಯಾಂಕಿನ ಹಿಂದಿನ ಉದ್ಯೋಗಿಗಳು ಶೆಟ್ಟಿ ಅವರ ಗೌರವಾರ್ಥವಾಗಿ ರಸ್ತೆಯ ಮರುನಾಮಕರಣ ಮಾಡುವುದಕ್ಕೆ ಬೆಂಬಲ ಸೂಚಿಸಿದರು.