ಮಂಗಳೂರು, ಸೆ 23(DaijiworldNews/PY): ಲೇಡಿಹಿಲ್ ಜಂಕ್ಷನ್ ಅಥವಾ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡುವ ವಿಚಾರವು ಟೀಕೆಗೆ ಗುರಿಯಾಗಿದ್ದು, ವಿವಿಧ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು.






ಈ ವಿಚಾರವಾಗಿ ಕೆಲವು ವಿದ್ಯಾರ್ಥಿಗಳು ಆಕ್ಷೇಪಣೆ ಎತ್ತಿದ್ದರು ಅಲ್ಲದೇ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಥೋಲಿಕ್ ಸಭಾ ಮುಖಂಡರು ಮಂಗಳೂರು ನಗರ ನಿಗಮದ (ಎಂಸಿಸಿ) ಮೇಯರ್ಗೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಆಯುಕ್ತರು ಹಾಗೂ ಮೇಯರ್ ಅವರನ್ನು ಉದ್ದೇಶಿಸಿ ಬರೆಯಲಾಗಿರುವ ಮನವಿ ಪತ್ರದಲ್ಲಿ ಕಥೋಲಿಕ್ ಸಭಾ ''ಲೇಡಿಹಿಲ್'' ಹೆಸರಿನ ಐತಿಹಾಸಿಕ ಮಹತ್ವ ಮತ್ತು ಹೆಸರಿಗೆ ಇರುವ ಭಾವಾನಾತ್ಮಕ ಸಂಬಂಧಗಳ ಬಗ್ಗೆ ವಿವರಿಸಲಾಗಿದೆ. ಅಲ್ಲದೇ, ಬಸ್ಸುಗಳು ಹಾಗೂ ಬಸ್ಸು ನಿಲ್ದಾಣಗಳು ಬಳಸುತ್ತಿರುವ ಹೆಸರುಗಳ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅದಾಗಿಯೂ, ವಿವಿಧ ವಿರೋಧಗಳು ಹಾಗೂ ಅಸಮಾಧನಗಳ ನಡುವೆ ಈ ಪ್ರಸ್ತಾಪವನ್ನು ಪಾಲಿಕೆಯು ಸದ್ಯ ಉಳಿಸಿಕೊಂಡಿದೆ.
ಇದೀಗ ಖಾಸಗಿ ಬಸ್ ಮಾಲೀಕರು ಲೇಡಿಹಿಲ್ ಜಂಕ್ಷನ್ ಅನ್ನು ನಾರಾಯಣ ಗುರು ವೃತ್ತಕ್ಕೆ ಮರುನಾಮಕರಣ ಮಾಡುವುದನ್ನು ಬೆಂಬಲಿಸಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಈ ಕ್ರಮಕ್ಕೆ ಮಂಗಳೂರಿನ ಹಲವಾರು ಖಾಸಗಿ ಬಸ್ಸುಗಳು ಬೆಂಬಲ ನೀಡಿದ್ದು, ಬಸ್ಸುಗಳಲ್ಲಿ ನಾರಾಯಣ ಗುರು ಸರ್ಕಲ್ ಎನ್ನುವ ಫಲಕಗಳನ್ನು ಹಾಕಿಕೊಂಡಿವೆ.
ಪಾಲಿಕೆಯ ಮಂಡಳಿಯು ತನ್ನ ಕಾರ್ಯಸೂಚಿಯ ಭಾಗವಾಗಿ ವೃತ್ತವನ್ನು ಮರುನಾಮಕರಣ ಮಾಡಲು ಪ್ರಸ್ತಾಪಿಸಿತ್ತು.