ಉಡುಪಿ, ಸೆ. 24 (DaijiworldNews/MB) : ಕುವೈತ್ನಿಂದ ಹಿಂದಿರುಗುವಾಗ ಕೆಲವೊಂದು ಕುವೈತ್ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಉಡುಪಿ ಜಿಲ್ಲೆಯ ಗಿರಿಜಾ ಅವರು ಸೆಪ್ಟೆಂಬರ್ 23 ಬುಧವಾರ ಕುವೈತ್ ಏರ್ವೇಸ್ ವಿಮಾನದಿಂದ ಬೆಂಗಳೂರಿಗೆ ತಲುಪಿದ್ದಾರೆ.

ಕುವೈತ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಡುಪಿ ಮೂಲದ ಗಿರಿಜಾ ಅವರು ಭಾರತಕ್ಕೆ ವಾಪಾಸ್ ಬರಲು ಸೆಪ್ಟೆಂಬರ್ 12 ರಂದು ಕುವೈತ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಬಳಿಕ ನಾಪತ್ತೆಯಾಗಿದ್ದರು. ಬಳಿಕ ಗಿರಿಜಾ ಅವರನ್ನು ಎಮಿಗ್ರೆಷನ್ ಕ್ಲಿಯರೆನ್ಸ್ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಇದ್ದಕ್ಕಿದ್ದಂತೆ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಕೊನೆಯ ಕ್ಷಣದಲ್ಲಿ ಅವರು ಬೋರ್ಡಿಂಗ್ ರದ್ದುಗೊಂಡಿತ್ತು.
ಗಿರಿಜಾ ಅವರು ಭಾರತಕ್ಕೆ ವಾಪಾಸ್ ಬರಲು ಅನೇಕ ಮಂದಿ ಸಹಾಯ ಮಾಡಿದರು. ಬಹ್ರೇನ್ನ ಕೆಂಜೂರ್ ಶಶಿಧರ್ ಶೆಟ್ಟಿ, ಕುವೈತ್ ತುಳುಕೂಟ ಮಾಜಿ ಅಧ್ಯಕ್ಷ, ವಿಲ್ಸನ್ ಡಿಸೋಜ, ಕುವೈತ್ ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ.ಶೇಖರ್ ಶೆಟ್ಟಿ, ಕುವೈತ್ ಮುಸ್ಲಿಂ ಅಸೋಸಿಯೇಷನ್ ಕರ್ನಾಟಕ ಘಟಕದ ಪ್ರತಿನಿಧಿ, ಬಂಟ್ವಾಳದ ಅಬ್ದುಲ್ ಲತೀಫ್, ಕುವೈತ್ನಲ್ಲಿ ಹೊಸದಾಗಿ ನೇಮಕಗೊಂಡ ರಾಯಭಾರಿ, ಶಿಬಿ ಜಾರ್ಜ್, ಎನ್ಆರ್ಐ ಫೋರಂ ಕರ್ನಾಟಕದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಮುಂತಾದವರು ಗಿರಿಜಾ ಅವರು ಮನೆಗೆ ವಾಪಾಸ್ ಮರಳಲು ಸಹಾಯ ಮಾಡಿದರು ಎಂದು ಕುವೈತ್ನ ಉದ್ಯಮಿ ಕಾಸರಗೋಡು ಮೋಹನ್ದಾಸ್ ಕಾಮತ್ ಹೇಳಿದ್ದಾರೆ.