ಮಂಗಳೂರು, ಸೆ. 24 (DaijiworldNews/MB) : ಡ್ರಗ್ಸ್ ಸಾಗಾಟ ಹಾಗೂ ಸೇವನೆ ಆರೋಪದಲ್ಲಿ ಬಂಧನಕ್ಕೊಳಪಟ್ಟಿರುವ ಡ್ಯಾನ್ಯರ್ ಕಿಶೋರ್ ಅಮನ್ ಶೆಟ್ಟಿಯ ಆಪ್ತ ಸ್ನೇಹಿತನೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತನನ್ನು ತರುಣ್ ಎಂದು ಹೇಳಲಾಗಿದೆ.
ಡ್ಯಾನ್ಸರ್ ಕಿಶೋರ್ ಶೆಟ್ಟಿ ಈ ಹಿಂದೆ ವಿಚಾರಣೆಯ ಸಂದರ್ಭ ಡ್ರಗ್ಸ್ ಬಗ್ಗೆ ಆಪ್ತ ಸ್ನೇಹಿತನೋರ್ವ ತಿಳಿಸಿದ್ದ ಎಂದು ಹೇಳಿದ್ದು ಕಿಶೋರ್ನ್ನು ಡ್ರಗ್ ಲೋಕಕ್ಕೆ ಪರಿಚಯ ಮಾಡಿದವನು ತರುಣ್ ಎಂದು ಹೇಳಲಾಗಿದೆ.
ಇನ್ನು ತರುಣ್ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಡ್ರಗ್ ಟೆಸ್ಟ್ ಮಾಡಿಸಿದ್ದು ಈತನ ವರದಿಯು ಪಾಸಿಟಿವ್ ಎಂದು ತಿಳಿದು ಬಂದಿದ್ದು ಸದ್ಯ ಪೊಲೀಸರು ತರುಣ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕಿಶೋರ್ ಜೊತೆ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಣಿಪುರಿ ಮೂಲದ ಆಸ್ಕಾ ಎಂಬ ಯುವತಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.