ಉಡುಪಿ, ಸೆ. 24 (DaijiworldNews/MB) : ನಡು ರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದ ಬೆಚ್ಚಿ ಬೀಳಿಸುವ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ಘಟನೆ ನಡೆದಿದೆ.




ಹತ್ಯೆಯಾದ ವ್ಯಕ್ತಿಯನ್ನು ಇನ್ನಾ ಗ್ರಾಮದ ಕಿಶನ್ ಹೆಗ್ಡೆ ಎಂದು ಗುರುತಿಸಲಾಗಿದೆ.
ಇನ್ನು ಮಂಗಳೂರು ಮೂಲದ ಗ್ಯಾಂಗ್ ಒಂದು ಈ ಹತ್ಯೆ ಮಾಡಿದೆ ಎಂದು ಹೇಳಲಾಗಿದೆ. ಕಿಶನ್ ಅವರನ್ನು ಎರಡು ಕಾರುಗಳಲ್ಲಿ ಬೆನ್ನಟ್ಟಿದ್ದು ಕಿಶನ್ ಕಾರಿಗೂ ಈ ಗ್ಯಾಂಗ್ನವರು ಹಾನಿಮಾಡಿದ್ದಾರೆ ಎನ್ನಲಾಗಿದೆ.
ಕಾರ್ಕಳ ಕಡೆಗೆ ಹೋಗುವ ರಸ್ತೆಯಲ್ಲಿ ಹಲ್ಲೆಕೋರರು ಪರಾರಿಯಾಗಿದ್ದು ಈ ಗ್ಯಾಂಗ್ನಲ್ಲಿ 15 ಜನರು ಇದ್ದರು ಎಂದು ವರದಿಗಳು ತಿಳಿಸಿವೆ.
ಸ್ಥಳಕ್ಕೆ ಹಿರಿಯಡ್ಕ ಪೋಲಿಸರು ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಿಶನ್ ರೌಡಿ-ಶೀಟರ್ ಎಂದು ಹೇಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಜಿಲ್ಲಾ ಗಡಿಯಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.