ಕಡಬ, ಸೆ 24(DaijiworldNews/PY): ಪದವೀಧರೆಯಾದರೂ ಕೂಡಾ ಯಾವುದೇ ಸೂಕ್ತ ಉದ್ಯೋಗ ಸಿಗದ ಕಾರಣ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಸೆ.23ರ ಬುಧವಾರ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಪರಂಗಾಜೆ ನಿವಾಸಿ ಬಾಬು ಗೌಡ ಎಂಬವರ ಪುತ್ರಿ ಭವ್ಯ ಪಿ.ಬಿ (27) ಗುರುತಿಸಲಾಗಿದೆ.
ಭವ್ಯ ಎಂ.ಕಾಂ ಸ್ನಾತಕೋತ್ತರ ಪದವೀಧರೆಯಾಗಿದ್ದು, ತನ್ನ ಅರ್ಹತೆಗೆ ತಕ್ಕದಾದ ಉದ್ಯೋಗ ಸಿಕ್ಕಿಲ್ಲ. ಹಲವಾರು ಕಡೆ ಉದ್ಯೋಗಕ್ಕಾಗಿ ಪ್ರಯತ್ನಸಿದ್ದರೂ ಕೂಡಾ ಉದ್ಯೋಗ ದೊರಕಿಲ್ಲ. ಈ ಬಗ್ಗೆ ಮನನೊಂದ ಯುವತಿ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಯುವತಿಯ ಸಹೋದರ ಉಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.