ಸುಳ್ಯ, ಸೆ. 24 (DaijiworldNews/SM): ದ.ಕ ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗ ಸಂಪಾಜೆಯಲ್ಲಿ ಮತ್ತೆ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದು, ಹಲವು ತೆಂಗಿನ ಮರ ಸಹಿತ ಕೃಷಿ ಬೆಳೆ ನಾಶಗೊಳಿಸಿವೆ.

ಸುಳ್ಯ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಸನಿಹದ ಕೊಡಗು ಸಂಪಾಜೆಯ ಹಿಮೇಂದ್ರ ಅವರಿಗೆ ಸೇರಿದ ಕೃಷಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ 5 ತೆಂಗಿನ ಮರ, 3 ಅಡಿಕೆ ಮರ, 20ಕ್ಕೂ ಅಧಿಕ ಬಾಳೆ ಮರ ಹಾಗೂ ಕೊಕ್ಕೋ ಮರಗಳನ್ನು ಮುರಿದು ಹಾಕಿವೆ. ಆನೆಗಳು ಕುಂಟಿಕಾನ ಬಳಿಯಿದ್ದು ಅಲ್ಲಿಂದ ರಾತ್ರಿ ಸಮಯದಲ್ಲಿ ಬಂದು ದಾಳಿ ನಡೆಸಿವೆ.
5 ತೆಂಗಿನ ಮರಗಳ ಸಹಿತ ಅಡಿಕೆ,ಬಾಳೆ, ಕೊಕ್ಕೊ ಮರಗಳನ್ನು ಕಾಡಾನೆಗಳು ರಾತ್ರಿ ಸಮಯದಲ್ಲಿ ಬಂದು ದಾಳಿ ನಡೆಸಿವೆ. ಕಾಡಾನೆಗಳು ಬಂದು ದಾಳಿ ಮಾಡಿರುವ ಬಗ್ಗೆ ಅರಣ್ಯ ಇಲಾಖೆಗೆ ಬರೆಯಲಾಗಿದ್ದು ಬಂದು ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹಿಮೇಂದ್ರ ತಿಳಿಸಿದ್ದಾರೆ.