ಮಂಗಳೂರು, ಸೆ 25(DaijiworldNews/PY): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆ ಅನುಶ್ರೀ ಅವರ ವಿಚಾರಣೆಯನ್ನು ಮಂಗಳೂರಿನ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ.

ಆರೋಪಿ ಕಿಶೋರ್, ತರುಣ್, ಅಕೀಲ್ ಅವರು ಸದ್ಯ ನಾರ್ಕೊಟಿಕ್ ಠಾಣೆಯಲ್ಲೇ ಇದ್ದು, ಅವರ ಸಮ್ಮುಖದಲ್ಲೇ ಅನುಶ್ರೀ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅನುಶ್ರೀ ಅವರನ್ನು ಡಿಸಿಪಿ ವಿನಯ್ ಗಾಂವ್ಕರ್ ಅವರು ವಿಚಾರಣೆ ಮಾಡಲಿದ್ದಾರೆ.