ಉಡುಪಿ, ಸೆ. 25(DaijiworldNews/HR): ಮುಂಬೈ ಮೂಲದ ಯುವಕನೊಬ್ಬ ಉಡುಪಿಯ ತನ್ನ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಸಾಂಧರ್ಭಿಕ ಚಿತ್ರ
ಮೃತನನ್ನು ಮುಂಬೈ ನಿವಾಸಿ ನೀಲ್ ಡಿ ಕ್ರೂಜ್ (18) ಎಂದು ಗುರುತಿಸಲಾಗಿದೆ.
ನೀಲ್ ಮುಂಬೈನ ಪ್ರಸಿದ್ಧ ಕಲಾ ಕಾಲೇಜಿನಿಂದ ಬಿ.ಎ. ವ್ಯಾಸಾಂಗ ಮಡುತ್ತಿದ್ದು, ಮುಂಬೈನ ಬೊರಿವಾಲಿಯ ಎಚ್ಸಿಜಿ ಕ್ಯಾನ್ಸರ್ ಕೇಂದ್ರದಲ್ಲಿ ವೃತ್ತಿಯಲ್ಲಿ ದಾದಿಯಾಗಿದ್ದ ಜಸಿಂತಾ ಡಿ ಕ್ರೂಜ್ ಅವರ ಏಕೈಕ ಪುತ್ರ.
ನೀಲ್ ದೀರ್ಘಕಾಲದವರೆಗೆ ಖಿನ್ನತೆಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಮುಂಬೈಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ಚಿಕಿತ್ಸೆಯಲ್ಲಿದ್ದರು. ವಾತಾವರಣದ ಬದಲಾವಣೆಗಾಗಿ ವಿಹಾರಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದು, ನೀಲ್ ಅವರ ತಾಯಿ ಹುಡೆನಲ್ಲಿ ವಾಸಿಸುವ ತನ್ನ ಸ್ನೇಹಿತ ವಾಲ್ಟರ್ ಅವರೊಂದಿಗೆ ಕೆಮ್ಮನುಗೆ ಕಳುಹಿಸಿದರು.
ಮಧ್ಯರಾತ್ರಿ ಸುಮಾರಿಗೆ ನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿದ್ದ ಜನರು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಗನ ಸಾವಿನ ಬಗ್ಗೆ ಕೇಳಿದ ಜಸಿಂತಾ ಶುಕ್ರವಾರ ಮುಂಬೈನಿಂದ ಉಡುಪಿಗೆ ಬಂದಿದ್ದಾರೆ.
ಮಾಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.