ಬ್ರಹ್ಮಾವರ, ಸೆ 25(DaijiworldNews/PY): ಸ್ನೇಹಿತನ ಚಿನ್ನದ ಸರವನ್ನು ನೋಡಲು ತೆಗೆದುಕೊಂಡ ಇಬ್ಬರು ಸರವನ್ನು ವಾಪಾಸ್ಸು ನೀಡದೇ ಬೈಕ್ನಲ್ಲಿ ಪರಾರಿಯಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಯಡ್ತಾಡಿ ಗ್ರಾಮದ ಅಲ್ತಾರಿನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ವಂಡಾರಿನ ಮಹೇಂದ್ರ (19) ಅಲ್ತಾರಿನಲ್ಲಿರುವ ತನ್ನ ಸ್ನೇಹಿತ ಸುಧೀರನೊಂದಿಗೆ ಅವನ ಮನೆಯ ಬಳಿ ಮಾತನಾಡಿಕೊಂಡಿರುವಾಗ ಮಧ್ಯಾಹ್ನ ಸುಮಾರು ಸಮಯ 4 ಗಂಟೆಗೆ ಅಲ್ಲಿಗೆ ಅವರ ಪರಿಚಯ ಇರುವ ಅನಿಲ ಹಾಗೂ ಸುರೇಶ್ ಎಂಬುವವರು ಬೈಕ್ನಲ್ಲಿ ಬಂದಿದ್ದು, ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ಮಹೇಂದ್ರ ಅವರ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ನೋಡಿ ಸರ ತುಂಬಾ ಚೆನ್ನಾಗಿದೆ, ಒಮ್ಮೆ ನೋಡಿ ಕೊಡುತ್ತೇವೆ ಕೊಡು ಎಂದು ಕೇಳಿದ್ದಾರೆ. ಆಗ ಮಹೇಂದ್ರ ಅವರನ್ನು ನಂಬಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆದು ಅನಿಲ ಎಂಬಾತನ ಕೈಗೆ ನೀಡಿದ್ದು, ಈ ವೇಳೆ ಆರೋಪಿಗಳಿಬ್ಬರೂ ಚೈನ್ ಅನ್ನು ನೋಡುತ್ತಾ ಒಮ್ಮೆಲೆ ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಮಹೇಂದ್ರ ರವರು ಹಾಗೂ ಅವರ ಸ್ನೇಹಿತ ಸ್ವಲ್ಪ ದೂರ ಓಡಿ ಹೋಗಿ ಕರೆದು ಹುಡುಕಾಡಿದರೂ ಆರೋಪಿಗಳು ಎಲ್ಲೂ ಪತ್ತೆಯಾಗಿಲ್ಲ. ಆರೋಪಿಗಳಿಬ್ಬರೂ ಮಹೇಂದ್ರ ಅವರನ್ನು ನಂಬಿಸಿ ಅವರಿಂದ ಸುಮಾರು 50,000 ರೂ ಬೆಲೆ ಬಾಳುವ ಚಿನ್ನದ ಸರವನ್ನು ಪಡೆದು ವಾಪಾಸ್ಸು ಕೊಡದೇ ಪರಾರಿಯಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.