ಕಾಸರಗೋಡು, ಸೆ. 25(DaijiworldNews/HR): ಜಿಲ್ಲೆಯಲ್ಲಿ ಇಂದು 268 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 257 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾದರೆ ಹೊರರಾಜ್ಯಗಳಿಂದ ಬಂದ 7 ಹಾಗೂ ವಿದೇಶದಿಂದ ಬಂದ 4 ಮಂದಿಗೆ ಸೋಂಕು ತಗಲಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9415ಕ್ಕೆ ಏರಿಕೆಯಾಗಿದೆ. 686 ಮಂದಿ ವಿದೇಶದಿಂದ ಹಾಗೂ 520 ಮಂದಿ ಹೊರರಾಜ್ಯಗಳಿಂದ ಬಂದವರು. 8209 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.
7378 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 71 ಮಂದಿ ಮೃತಪಟ್ಟಿದ್ದು, 2065 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 1046 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3948 ಮಂದಿ ನಿಗಾದಲ್ಲಿದ್ದು, 906 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.