ಬೆಳ್ಮಣ್, ಸೆ. 25 (DaijiworldNews/SM): ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಸೆಪ್ಟೆಂಬರ್ 25ರ ಶುಕ್ರವಾರ ನಡೆದಿದೆ.

ನಂದಳಿಕೆ ನಿವಾಸಿ ಅಕ್ಷತಾ(25) ಮೃತ ಯುವತಿ. ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ವರ್ಷಗಳ ಹಿಂದೆ ಈಕೆಗೆ ಮದುವೆಯಾಗಿದ್ದು ಕೆಲ ಸಮಯದಿಂದ ಆಕೆ ತಾಯಿ ಮನೆಯಲ್ಲೇ ವಾಸವಿದ್ದಳು. ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ನಿಗೂಢತೆಯಿಂದ ಕೂಡಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.