ಮೂಡುಬಿದಿರೆ, ಸೆ. 25 (DaijiworldNews/SM): ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಶುಕ್ರವಾರ ಸಾಯಂಕಾಲ ಅಕಸ್ಮಾತ್ ಬೆಂಕಿ ಕಾಣಿಕೊಂಡಿದ್ದು, ಕ್ಷಣಾರ್ಧದಲ್ಲೇ ಕಟ್ಟಡ ಬೆಂಕಿಗಾಹುತಿಯಾಗಿದೆ.

ಸಾಯಂಕಾಲ ಪಂಚಾಯಿತಿ ಕಚೇರಿ ಮುಚ್ಚಿದ ಬಳಿಕ ಕಟ್ಟಡದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆಗ್ನಿಶಾಮಕದಳವರಿಗೆ ತಿಳಿಸಿದ್ದಾರೆ. ಕಚೇರಿಯಲ್ಲಿದ್ದ 125 ಪ್ಲಾಸ್ಟಿಕ್ ಕುರ್ಚಿ ಹಾಗೂ ಕಟ್ಟಡ ಪರಿಕರಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ದಾಖಲೆಗಳು ಸುರಕ್ಷಿತವಾಗಿವೆ. ಅವುಗಳಿಗೆ ಬೆಂಕಿ ಆವರಿಸಿಕೊಂಡಿಲ್ಲ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಕೊಂಡಿರಬಹುದು ಎಂದು ಪಿಡಿಒ ಶೇಖರ್ ತಿಳಿಸಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.