ಮಂಗಳೂರು, ಸೆ. 25 (DaijiworldNews/SM): ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ನೋಟೀಸಿನ ಬಳಿಕವೂ ನಿರೂಪಕಿ ಅನುಶ್ರೀ ಶುಕ್ರವಾರದಂದು ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ಅನುಶ್ರೀ ವಿರುದ್ಧ ಗರಂ ಆಗಿದ್ದಾರೆ.

ಶನಿವಾರ ಬೆಳಗ್ಗೆ 11 ಗಂಟೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ವಾರ್ನಿಂಗ್ ನೀಡಿದ್ದಾರೆ. ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್ ಠಾಣೆಯಲ್ಲಿ ಅನುಶ್ರೀ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಶುಕ್ರವಾರದಂದು ಹಾಜರಾಗಿಲ್ಲ. ಶನಿವಾರದಂದು ವಿಚಾರಣೆಗೆ ಹಾಜರಾಗಲೇ ಬೇಕಾಗಿದೆ.
ಇನ್ನು ಶುಕ್ರವಾರದಂದು ಮಂಗಳೂರಿಗೆ ಆಗಮಿಸಿರುವ ಅನುಶ್ರೀಯವರು ವಿಚಾರಣೆ ಎದುರಿಸಲು ಕಾನೂನು ಸಲಹೆ ಪಡದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇನ್ನು ಶುಕ್ರವಾರದಂದು ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿ ಮಂಗಳೂರಿಗೆ ಬಂದಿದ್ದೇನೆ ಎಂಬುವುದಾಗಿ ಅನುಶ್ರೀ ಮಾಹಿತಿ ನೀಡಿದ್ದರು. ಆದರ ಬಳಿಕ ಪೊಲೀಸ್ ತನಿಖೆಗೂ ಬಂದಿಲ್ಲ, ಕರೆಯನ್ನು ಮಾಡಿಲ್ಲ ಎಂದು ತಿಳಿದುಬಂದಿದೆ.