ಮಂಗಳೂರು, ಸೆ. 26 (DaijiworldNews/MB) : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದವರಿಗೆ ಸೆಪ್ಟೆಂಬರ್ 26 ರ ಶನಿವಾರ ಅಧಿಕಾರಿಗಳು ದಂಡ ವಿಧಿಸಿದ್ದು ಶುಕ್ರವಾರ ಮಂಗಳೂರು ನಗರ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾ ನಿಯಮ ಉಲ್ಲಂಘಿಸಿದ ಜನರಿಂದ ಸುಮಾರು 5,000 ರೂ. ದಂಡ ವಸೂಲಿ ಮಾಡಿದ್ದಾರೆ.









ಮಂಗಳೂರು ನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಮಂಜಯ ಶೆಟ್ಟಿ ಮತ್ತು ಇತರ ಅಧಿಕಾರಿಗಳು ಟ್ರಾಫಿಕ್ ಪೊಲೀಸರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು ನಿಲ್ಲಿಸಿ ದಂಡ ವಿಧಿಸಿರುವುದು ನಗರದಲ್ಲಿ ಕಂಡು ಬಂದಿದೆ.
ಗುರುವಾರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಮುಂತಾದ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ್ದರು.
ಅಧಿಕಾರಿಗಳು ಸಕ್ರಿಯ ಪ್ರಚಾರವನ್ನು ಮಾಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆಯ ಬಗ್ಗೆ ಜನರಿಗೆ ತಿಳಿಸಿದ ನಂತರವೂ ಜನರು ಕೊರೊನಾ ಮಾನದಂಡವನ್ನು ಸರಿಯಾಗಿ ಪಾಲಿಸುತ್ತಿಲ್ಲ, ನಿರ್ಲಕ್ಷ್ಯ ತೋರುತ್ತಿದ್ದಾರೆ. ನಿಯಮಗಳನ್ನು ಪಾಲಿಸದ ಜನರು ತಮ್ಮನ್ನು ತಾವು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲ, ತಮ್ಮ ಕುಟುಂಬ ಸದಸ್ಯರು ಸೇರಿದಂತೆ ಇತರರಿಗೆ ಸೋಂಕು ತಗಲುವ ಅಪಾಯವನ್ನೂಂಟುಮಾಡುತ್ತಾರೆ ಎಂದಿದ್ದರು.