ಕಾಸರಗೋಡು, ಸೆ. 26 (DaijiworldNews/MB) : ಮುಸ್ಲಿಂ ಲೀಗ್ ಪಕ್ಷದ ಕಾರ್ಯಕರ್ತನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕಾಸರಗೋಡು ಡಿ ವೈ ಎಸ್ ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ವಿಶೇಷ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ಉಪ್ಪಳ ಕೈಕಂಬದ ಆದಂ (23) ಮತ್ತು ನಯಾಬಜಾರಿನ ನೌಶಾದ್ (24) ಎಂದು ಗುರುತಿಸಲಾಗಿದೆ.
ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳ ದ ಮುಸ್ತಫಾ (38) ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯಾಗಿದ್ದಾನೆ.
ಕಳೆದ ಜನವರಿಯಲ್ಲಿ ಕೃತ್ಯ ನಡೆದಿತ್ತು. ಜಿಮ್ಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಬಂದ ತಂಡವು ಇರಿದು ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಮುಸ್ತಫಾರವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳು ತಲೆ ಮರೆಸಿಕೊಂಡಿದ್ದರು.