ವಿಟ್ಲ, ಸೆ. 26 (DaijiworldNews/MB) : ವಿಟ್ಲ ಕಸಬದಲ್ಲಿ ಸೆಪ್ಟೆಂಬರ್ 26 ರ ಶನಿವಾರ ಅಕ್ರಮವಾಗಿ ರಕ್ತ ಚಂದನ ಸಾಗಾಟ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪುತ್ತೂರು ಸವಣೂರು ಗ್ರಾಮದ ನಿವಾಸಿ ಅಬ್ಬು ಚಾಪಳ್ಳ ಅಲಿಯಾಸ್ ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ.
ವಿಟ್ಲ ಕಸಬ ಎಂಬಲ್ಲಿ ಅನುಮಾನಸ್ಪದವಾಗಿ ಕಂಡ ವ್ಯಕ್ತಿಯನ್ನು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ತೆರಳಿ ವಿಚಾರಿಸಿದ ಸಂದರ್ಭ ಆತನ ಬಳಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ರೂ 24,200/- ಮೌಲ್ಯದ 12.100 ಕಿಲೋ ಗ್ರಾಂ ತೂಕದ ರಕ್ತ ಚಂದನದ ಮರದ ತುಂಡು ದೊರಕಿದ್ದು, ಯಾವುದೇ ಸಾಗಟ ಪರವಾನಗಿ ಹೊಂದಿರದ ಹಿನ್ನೆಲೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಆತನನ್ನು ವಿಚಾರಿಸಿದಾಗ ಆತ ಸಯ್ಯದ್ ಎಂಬಾತನಿಂದ ರಕ್ತಚಂದನ ಪಡೆದಿರುವುದಾಗಿ ತಿಳಿಸಿದ್ದಾನೆ.
ಇನ್ನು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.