ಉಡುಪಿ, ಸೆ. 26 (DaijiworldNews/MB) : ಉಡುಪಿ ಜಿಲ್ಲೆಯ ಒಟ್ಟು 14 ಸಂಘಟನೆಗಳು ಸೆಪ್ಟೆಂಬರ್ 28 ರಂದು ರಾಜ್ಯವಾಪ್ತಿ ನಡೆಯುವ "ಕರ್ನಾಟಕ ಬಂದ್" ಗೆ ಬೆಂಬಲ ಸೂಚಿಸುತ್ತದೆ. ಶನಿವಾರದಿಂದಲೇ ಜನರನ್ನು ಸ್ವಯಂ ಪ್ರೇರಿತ ಬಂದ್ಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ. ನಗರದಲ್ಲಿ ಅಲ್ಲಲ್ಲಿ ಬೆಂಬಲ ಸೂಚಿಸಿದ ಸಂಘಟನಾ ಕಾರ್ಯಕರ್ತರು ಅಲ್ಲಲ್ಲಿ ರ್ಯಾಲಿ ನಡಸಲಿವೆ, ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ (ಸಿಪಿಐಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದರು.


ಅವರಿಂದು ಉಡುಪಿಯ ಮುಸ್ಲಿಂ ವೇಲ್ಫೇರ್ ಅಸೋಶಿಯೇನ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಸೋಮವಾರ ಕರ್ನಾಟಕ ಬಂದ್ನ್ನು ಜಿಲ್ಲೆಯ 14 ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಅವೆಂದರೆ, ಕಾಂಗ್ರೆಸ್ ಕಿಸಾನ್ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಜನತಾದಳ (ಜಾತ್ಯಾತೀತ), ದಲಿತ ಸಂಘರ್ಷ ಸಮಿತಿ, ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸಹಬಾಳ್ವೆ ಉಡುಪಿ ದಲಿತ ಸಂಘರ್ಷ ಸಮಿತಿ, ವೆಲ್ವರ್ ಪಾರ್ಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿ ಮುಸ್ಲಿಂ ಒಕ್ಕೂಟ, ಕರ್ನಾಟಕ ರಾಷ್ಟ್ರ ಸಮಿತಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿ.ಐ.ಟಿ.ಯು), ಭಾರತೀಯ ಕ್ರಿಶ್ಚಿಯನ್ ಒಕ್ಕೂಟ, ಅಂಬೇಡ್ಕರ್ ಯುವ ಸೇನೆ ಬೆಂಬಲ ಸೂಚಿಸಿವೆ ಎಂದರು.
ಭೂ ಸುಧಾರಣೆ ಕಾಯ್ದೆ ಅನೇಕ ರೈತರು ತಮ್ಮ ಭೂ ಮಾಲೀಕತ್ವವನ್ನು ಕಳೆದುಕೊಂಡಿದ್ದಾರೆ. ರೈತ ವಿರೋಧಿ ಕಾಯ್ದೆಗಳು ಅನೇಕ ಜಾರಿಯಾಗಿವೆ. ಕಾರ್ಪೊರೇಟ್ ಕಂಪನಿಗಳ ಪರವಾದ, ವಿದ್ಯುತ್ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ಹೀಗೆ ಎಲ್ಲಾ ಕಾಯ್ದೆ ಜನವಿರೋಧಿಯಾಗಿವೆ ಎಂದರು.
ರೈತ ಸಂಘಟನೆಗಳು, ಪ್ರತಿಪಕ್ಷಗಳ ಪ್ರತಿರೋಧವನ್ನು ಲೆಕ್ಕಿಸದೆ, ಪಾರ್ಲಿ ಕಾರ್ಪೊರೇಟ್ ಕಂಪನಿಗಳ ಹಿತವೇ ಮುಖ್ಯವೆಂದು ಈ ನೀತಿಗಳನ್ನು ಜಾರಿಗೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿದೆ. ಇಂತಹ ಸ್ಥಿತಿಯಲ್ಲಿ ರೈತ ವಿರೋಧಿ, ಜನವಿರೋಧಿ, ಕಾರ್ಪೋರೇಟ್ ಸರ್ಕಾರಗಳು ಹಿಂತೆಗೆದುಕೊಳ್ಳ ಬೇಕೆಂದು ಹಾಗೂ ಕಾರ್ಪೋರೇಶನ್ ಕೃಷಿಯನ್ನು ನಿಯಂತ್ರಿತ ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರವನ್ನು ರಕ್ಷಿಸುವ ಉದ್ದೇಶದಿಂದ ಕೆಳಗೆ ಕರ್ನಾಟಕ ಬಂದ್ಗೆ ರೈತ ಸಂಘಗಳು ತೀರ್ಮಾನಿಸಿವೆ. ಉಡುಪಿ ಜಿಲ್ಲೆಯ ರೈತರು, ಕಾರ್ಮಿಕರು, ವ್ಯಾಪಾರಿಗಳು ಬಂದ್ಗೆ ಸಹಕಾರ ನೀಡುವಂತೆ ಮನವಿ ಮಾಡಿದೆ. ಬಸ್ ಮಾಲಕರ ಸಂಘದವರಿಗೂ ಬಂದ್ ಗೆ ಬೆಂಬಲಿಸಲು ಮನವಿ ಮಾಡಿದ್ದೇವೆ ಎಂದರು ಬಾಲಕೃಷ್ಣ ಶೆಟ್ಟಿ.
ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ, ಶಶಿಧರ್ ಶೆಟ್ಟಿ ಎರ್ಮಾಳು, ಶಶಿಧರ್ ಗೊಲ್ಲ, ಕುಶಲ್ ಶೆಟ್ಟಿ, ಯೋಗೀಶ್ ಶೆಟ್ಟಿ, ಸುಂದರ್ ಮಾಸ್ಟರ್, ಅಬ್ದುಲ್ ಅಜೀಜ್ ಯಾಸೀನ್ ಮಲ್ಪೆ, ವಿನುತಾ ಕಿರಣ್, ಕವಿರಾಜ್ ಮುಂತಾದವರು ಉಪಸ್ಥಿತರಿದ್ದರು.