ಕಾಸರಗೋಡು, ಸೆ. 26 (DaijiworldNews/MB) : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನಕಳೆದಂತೆ ಏರಿಕೆಯಾಗುತ್ತಿದ್ದು, ಸಂಪರ್ಕದಿಂದ ಸೋಂಕು ಹರಡುತ್ತಿದೆ. ಶನಿವಾರ 224 ಮಂದಿಗೆ ಸೋಂಕು ದೃಢಪಟ್ಟಿದೆ.

207 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು 11 ಆರೋಗ್ಯ ಸಿಬಂದಿಗಳಲ್ಲೂ ಸೋಂಕು ಪತ್ತೆಯಾಗಿದೆ.
78 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9639 ಕ್ಕೆ ತಲುಪಿದೆ. 2205 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 4359 ಮಂದಿ ನಿಗಾದಲ್ಲಿದ್ದಾರೆ.