ಉಡುಪಿ,ಮೇ13: ಮೇ ೧೨ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕಾಪು ಕ್ಷೇತ್ರದಲ್ಲಿ ಹಲವು ಮಂದಿ ಮತದಾರರು ಮತದಾನದಿಂದ ವಂಚಿತರಾಗಿದ್ದಾರೆಂದು ತಿಳಿದುಬಂದಿದ್ದು. ಕೂಲಿ ಕಾರ್ಮಿಕರೇ ಅಧಿಕವಾಗಿರುವ ಈ ಪ್ರದೇಶದಲ್ಲಿ ೪೦೦ಕ್ಕೂ ಅಧಿಕ ಕಾರ್ಮಿಕರು ಮತ ಚಲಾಯಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಕಾಪುವಿನಲ್ಲಿ ಸುಮಾರು ೧೦೦೦ ಕ್ಕಿಂತಲೂ ಅಧಿಕ ಹೊರಜಿಲ್ಲೆ ಕೂಲಿ ಕಾರ್ಮಿಕರಿದ್ದಾರೆ. ಅವರಲ್ಲಿ ಸುಮಾರು ೫೦೦ ರಿಂದ ೬೦೦ ಕಾರ್ಮಿಕರನ್ನು ಅಲ್ಲಿನ ರಾಜಕೀಯ ನೇತಾರರು ಮತಚಲಾಯಿಸಲು ಕರೆದೊಯ್ದಿದ್ದಾರೆ. ಅವರಲ್ಲಿ ೪೦೦ ರಷ್ಟು ಕಾರ್ಮಿಕರು ಕಾಪುವಿನಲ್ಲಿಯೇ ಉಳಿದಿದ್ದು ಬಸ್ಸಿನ ವ್ಯವಸ್ಥೆ ಇಲ್ಲದೆ ಮತದಾನಕ್ಕೆ ತೆರಳಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.