ಉಡುಪಿ, ಸೆ. 26 (DaijiworldNews/MB) : "ರೌಡಿ ಶೀಟರ್ ಕಿಶನ್ ಹೆಗ್ಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ" ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಸೆಪ್ಟೆಂಬರ್ 26 ರ ಶನಿವಾರ ಮಾಹಿತಿ ನೀಡಿದರು.





ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಆರೋಪಿಗಳ ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಮನೋಜ್ ಕುಲಾಲ್ (37), ಚಿತ್ತರಂಜನ್ ಪೂಜಾರಿ (27), ಚೇತನ್ ಯಾನೆ ಚೇತು ಪಡೀಲ್ (27), ರಮೇಶ್ ಪೂಜಾರಿ (38) ಮತ್ತು ದೀಕ್ಷಿತ್ ಶೆಟ್ಟಿ ಯಾನೆ ದೇವಿ ಪ್ರಸಾದ್ (29) ಬಂಧಿತರು" ಎಂದು ತಿಳಿಸಿದ್ದಾರೆ.
"ಈ ಐವರು ಆರೋಪಿಗಳು ಕೂಡಾ ರೌಡಿ ಶೀಟರ್ಗಳಾಗಿದ್ದು ಅವರ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಬಂಧಿತರಿಂದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಮನೋಜ್ ಮತ್ತು ಕಿಶನ್ ಹೆಗ್ಡೆ ನಡುವಿನ ವೈಯಕ್ತಿಕ ಜಗಳ ಹಾಗೂ ಹಣಕಾಸಿನ ವಿಷಯಗಳಿಂದಾಗಿ ಈ ಕೊಲೆ ನಡೆದಿದೆ" ಎಂದು ತಿಳಿಸಿದ್ದಾರೆ.
"ಬಂಧಿತರು ಕಿಶನ್ ಹೆಗ್ಡೆ ಅವರನ್ನು ಮಂಗಳೂರಿನಿಂದ ಬೆನ್ನಟ್ಟಿದ್ದಾನೆ" ಎಂದು ಹೇಳಿದರು.
ಹೆಚ್ಚುವರಿ ಎಸ್ಪಿ ಉಡುಪಿ ಕುಮಾರಚಂದ್ರ, ಎಎಸ್ಪಿ ಜೈಶಂಕರ್, ಡಿಎಸ್ಪಿ ಅನಂತ ಪದ್ಮನಾಭ್, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಎಚ್ಸಿ ವಾಸು, ವಾಸು ಪೂಜಾರಿ, ಮಂಜುನಾಥ್, ಎಸ್ಐ ಮಣಿಪಾಲ್ ಮಂಜಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಕಾಪು ಡಿಸಿಐಬಿ ಮಹೇಶ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.