ಸುಳ್ಯ, ಸೆ 27(DaijiworldNews/PY): ಚಿತ್ರಕಲೆಯಲ್ಲಿ ಹಲವಾರು ಪ್ರಕಾರಗಳನ್ನು ಮಾಡಿರುವ ಪರೀಕ್ಷಿತ್ ನೆಲ್ಯಾಡಿ ಅವರು ತನ್ನ ಗೆಳೆಯರೊಂದಿಗೆ ಸೇರಿ ಇನ್ನೊಂದು ಅಭೂತಪೂರ್ವವಾದ ಚಿತ್ರಕಲೆ ಮಾಡಿ ವಿಶ್ವದಾಖಲೆ ಮಾಡಿದ್ದಾರೆ.




ಪರೀಕ್ಷಿತ್ ಗೆಳೆಯರಾದ ಚಾರ್ಲ್ಸ್ ಕೆ.ಸಿ ಇಚಿಲಂಪಾಡಿ ಹಾಗೂ ಮೊಹಮ್ಮದ್ ಮನ್ಸೂರು ಹೊಸಮಜಲು, ಕೌಕ್ರಾಡಿ ಇವರೊಂದಿಗೆ ಏಕಕಾಲದಲ್ಲಿ ಎರಡೂ ಕೈಗಳಲ್ಲಿ 3 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಪೇಪರ್ನಲ್ಲಿ ಪೋರ್ಟ್ರೈಟ್ ಪೇಪರ್ ಕಟ್ಟಿಂಗ್ ಚಿತ್ರಕಲೆಯನ್ನು ಮಾಡಿದ್ದು, ಸೆ.2ರಂದು ಹೊಸ ವಿಶ್ವದಾಖಲೆ ಗಳಿಸಿದ್ದು, ಇದಕ್ಕಾಗಿ ವರ್ಲ್ಡ್ ರೆಕಾರ್ಡ್ ಇಂಡಿಯಾದವರು ಮ್ಯಾಕ್ಸಿಮಮ್ ಮೊಸಾಯಿಕ್ ಪೋರ್ಟ್ರೈಟ್ ಯೂಸಿಂಗ್ ಪೇಪರ್ ಕಟ್ಟಿಂಗ್ಸ್ ಆರ್ಟ್ ಎನ್ನುವ ಹೊಸ ವಿಶ್ವದಾಖಲೆ ನೀಡಿದ್ದಾರೆ.
ಪರೀಕ್ಷಿತ್ ಹಾಗೂ ಅವರ ಸ್ನೇಹಿತರು ತಮ್ಮ ವಿದ್ಯಾಭ್ಯಾಸದೊಂದಿಗೆ ಚಿತ್ರಕಲೆಯನ್ನು ಕೂಡಾ ತಮ್ಮ ವಿದ್ಯಾಭ್ಯಾಸದ ಒಂದು ಅಂಗವೆಂದು ತಿಳಿದು ಸಾಧನೆ ಗೈದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿದ್ದುಕೊಡು ತಮ್ಮದೇ ಗ್ರಹಿಕೆಯ ಮೂಲಕ ಈ ಕಲೆಯನ್ನು ಮಾಡಿ ಅಭಿನಂದನೆ, ಪ್ರಶಂಸೆಗೆ ಪಾತ್ರರಾಗಿದ್ದಾರೆ.