ಉಡುಪಿ, ಸೆ. 27 (DaijiworldNews/MB) : ರೈತರಿಗೆ, ಕಾರ್ಮಿಕರಿಗೆ ತೊಂದರೆಯನ್ನು ಮಾಡಬೇಡಿ. ನಾಳಿನ ಕರ್ನಾಟಕ ಬಂದ್ಗೆ ಜೆಡಿಎಸ್ ಸಂಪೂರ್ಣ ಬೆಂಬಲ ಸೂಚಿಸುತ್ತದೆ, ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿಯವರು ಪಕ್ಷದ ಕಚೇರಿಯ್ಲಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.




ಕೆಲವು ಆಸ್ಪತ್ರೆಗಳಲ್ಲಿ ಐಸಿಯು ಸೌಲಭ್ಯ ಹೆಚ್ಚಾಗಿದೆ. ಆದರೂ ಕೊರತೆ ಕಾಣುತ್ತಿದೆ. ಖಾಸಗಿ ಆಸ್ಪತ್ರೆಗಳು ಬಡವರನ್ನು ಲೂಟಿ ಮಾಡುತ್ತಿದೆ. ಹಾಗಾದರೆ ಖಾಸಗಿ ಆಸ್ಪತ್ರೆಗಳು ಸರಕಾರದ ನಿಯಂತ್ರಣದಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದರು.
ಆಸ್ಪತ್ರೆಯ ಸ್ಥಿತಿಯನ್ನು ನೋಡಿ ಜನ ಭಯ ಭೀತರಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ಸಂಬಂಧಿಕರ ಬಗ್ಗೆ ಕೇಳಿದರೆ ಸರಿಯಾದ ಪ್ರತಿಕ್ರಿಯೆ ಕೊಡುವುದಿಲ್ಲ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಯೋಗೀಶ್ ಶೆಟ್ಟಿ ಸರಕಾರವನ್ನು ಎಚ್ಚರಿಸಿದರು.
ಉಡುಪಿಯಲ್ಲಿ ಹಿಂದೆಂದೂ ಆಗದ ಜಲ ಪ್ರವಾಹಕ್ಕೆ ಸಿಲುಕಿ ಅನೇಕ ಮನೆಗಳು ಪೂರ್ತಿಯಾಗಿ ಬಿದ್ದಿವೆ. ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನಲ್ಲಿ ಪ್ರವಾಹ ಆಗಿದ್ದಾಗ ರೂ. 10 ಲಕ್ಷ ಮನೆಕಟ್ಟಲು ಪರಿಹಾರ ನೀಡಿದೆ. 25 ಕೋಟಿಗೂ ಮಿಕ್ಕಿ ರೈತರ ಸಾಲಮನ್ನವನ್ನು, ಜನರಿಗೆ ಅಲ್ಪ ಸ್ವಲ್ಪ ಪರಿಹಾರ ಧನ ಕೊಟ್ಟು ಕೈತೊಳೆದು ಕೊಳ್ಳಬೇಡಿ ಎಂದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳಲ್ಲೂ ಜೆಡಿಎಸ್ ಅಭ್ಯರ್ಥಿ ನಿಲ್ಲಿಸಲು ನಿರ್ಧಾರವಾಗಿದೆ. ಈಗಾಗಲೇ 50 ಮಂದಿ ಅಭ್ಯರ್ಥಿಯ ಆಯ್ಕೆಯು ಆಗಿದೆ. ಗ್ರಾಮೀಣ ಅಭಿವೃದ್ಧಿಗೆ ಜೆಡಿಎಸ್ ಹೆಸರು ಪಡೆದಿದೆ. ತಳ ಮಟ್ಟದಿಂದ ಪಕ್ಷವನ್ನು ಬಲ ತುಂಬುವುದಕ್ಕೆ ಎಲ್ಲರು ಕಟಿ ಬದ್ಧರಾಗಿದ್ದಾರೆ. ಉಡುಪಿಯಲ್ಲಿ ಎಲ್ಲ ಸಮುದಾಯದ ದೊಡ್ಡ ನಾಯಕರು ಜೆಡಿಎಸ್ ನ್ನು ಸೇರಿಕೊಳ್ಳುವವರಿದ್ದಾರೆ. ಕುಮಾರಸ್ವಾಮಿಯವರ ಮತ್ತೆ ಮುಖ್ಯಮಂತ್ರಿಯಾಗುವುದರ ಬಗ್ಗೆ ಭರವಸೆ ಇದೆ ಎಂದರು ಯೋಗೀಶ್ ಶಟ್ಟಿ.
ಇದೇ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ತಮ್ಮ ಹುಟ್ಟು ಹಬ್ಬವನ್ನು ತಮ್ಮ ಕಾರ್ಯಕರ್ತರ ಜೊತೆಗೆ ಆಚರಿಸಿಕೊಂಡರು.
ವಾಸುದೇವ್ ರಾವ್, ಕಾರ್ಯಾಧ್ಯಕ್ಷ, ಶೇಖರ್ ಕೋಟ್ಯಾನ್, ಗಂಗಾಧರ್, ಉದಯ್ ಹೆಗ್ಡೆ, ಸುಧಾಕರ್ ಶೆಟ್ಟಿ, ಅಬ್ದುಲ್ ಖಾದರ್ , ಜಯರಾಮ್ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.