ಕಾಸರಗೋಡು, ಸೆ. 27 (DaijiworldNews/MB) : ಜಿಲ್ಲೆಯಲ್ಲಿ ಭಾನುವಾರ 252 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಈ ಪೈಕಿ 247 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಮೂವರು ಹೊರ ರಾಜ್ಯ ಹಾಗೂ ಇಬ್ಬರು ವಿದೇಶದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. 9 ಆರೋಗ್ಯ ಸಿಬಂದಿಗಳಿಗೆ ಸೋಂಕು ದೃಢಪಟ್ಟಿದೆ. 210 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 9881 ಮಂದಿಗೆ ಸೋಂಕು ದೃಢಪಟ್ಟಿದ್ದು, 7566 ಮಂದಿ ಗುಣಮುಖರಾಗಿದ್ದಾರೆ. 2217 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.4443 ಮಂದಿ ನಿಗಾದಲ್ಲಿದ್ದು, 1036 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.