ಮಂಗಳೂರು, ಮೇ 14 : ನಗರ ಬೋಂದೆಲ್ ನ ಮಹಾತ್ನಾ ಗಾಂಧಿ ಶತಾಬ್ದ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮೇ 15ರ ಮತ ಎಣಿಕಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸೂಚಿಸಲಾಗಿದೆ.
ಈ ನಿಟ್ಟಿನಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಪೊಲೀಸ್ ಆಯುಕ್ತರಾದ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕೆ ಎಚ್ ಬಿ ಕಚೇರಿಯಿಂದ ಕೆ ಎಚ್ ಬಿ ರಸ್ತೆ ಮತ್ತು ಗುಂಡೂರಾವ್ ಲೇನ್ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸೋದನ್ನು ನಿಷೇಧಿಸಲಾಗಿದೆ. ಬೋಂದೆಲ್ ಜಂಕ್ಷನ್ ನಿಂದ ಗುಂಡೂರಾವ್ ಲೇನ್ ಕ್ರಾಸ್ ವರೆಗೆ ವಾಹನಗಳಿಗೆ ಪ್ರವೇಶವಿಲ್ಲ. ಬಜ್ಪೆ ಕಡೆಯಿಂದ ಬರುವ ವಾಹನಗಳು ಕಾವೂರು ಜಂಕ್ಷನ್ ನಿಂದ ಕುಂಟಿಕಾನದ ಕಡೆಗೆ ಅಥವಾ ಕೂಳೂರು ಕಡೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಬೋಂದೆಲ್ ಕಾವೂರು ಗೆ ತೆರಳುವ ವಾಹನಗಳು ದಾಯ್ಜಿವರ್ಲ್ಡ್ ಕಟ್ಟಡದ ನಂತರ ಎಡಕ್ಕೆ ತಿರುಗಿ ಗುಂಡೂರಾವ್ ಲೇನ್ ಮೂಲಕ ತೆರಳುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ , ಚುನಾವಣಾ ಅಧಿಕಾರಿಗಳು ಅತ್ಯಾವಶ್ಯಕ ಸೇವೆಗಳ ವಾಹನಗಳು ಮತ್ತು ಅಧಿಕೃತ ಪಾಸು ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ:
ಮತ ಎಣಿಕೆಗಾಗಿ ಕೆಪಿಟಿ ಕಡೆಯಿಂದ ಬರುವ ವಾಹನಗಳನ್ನು ಗುಂಡೂರಾವ್ ಲೇನ್ ಮೂಲಕ ಸಂಚರಿಸಿ, ಕೆ ಎಚ್ ಬಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.