ಕಾರ್ಕಳ, ಸೆ. 27 (DaijiworldNews/MB) : ಹಿರ್ಗಾನ ಚಿಕ್ಕಲ್ಬೆಟ್ಟು ಎಂಬಲ್ಲಿ ಗದ್ದೆಯಲ್ಲಿ ಉದ್ಯಮಿಯೊಬ್ಬರು ನಾಡಕೋವಿ ಮೂಲಕ ಗುಂಡು ಸಿಡಿಸಿ ಆತ್ಮಹತ್ಯೆಗೈದ ಘಟನೆ ಸಂಭವಿಸಿದೆ.

ಸುನೀಲ್ ಶೆಟ್ಟಿ(41) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ.
ಮಹಾರಾಷ್ಟ್ರದ ಪೂನಾದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಸುನೀಲ್ ಶೆಟ್ಟಿಗೆ ವಿವಾಹವಾಗಿತ್ತು. ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಊರಿಗೆ ಬಂದಿದ್ದರು. ರವಿವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಮನೆ ಸಮೀಪದ ಗದ್ದೆಯಲ್ಲಿ ರಕ್ತದ ಮಡುವಿನಲ್ಲಿ ಸುನೀಲ್ ಶೆಟ್ಟಿ ಬಿದ್ದುಕೊಂಡಿದ್ದರು.
ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.