ಮಂಗಳೂರು, ಸೆ. 27 (DaijiworldNews/MB) : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಗುಪ್ತಚರ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು ವಿಮಾನದ ಸೀಟಿನಡಿ ಅಡಗಿಸಿಟ್ಟಿದ್ದ ಚಿನ್ನದ ಬಿಸ್ಕತ್ತು ಪತ್ತೆ ಹಚ್ಚಿದ್ದಾರೆ.


ದುಬೈ-ಮಂಗಳೂರು- ಹೈದರಾಬಾದ್ ನಡುವಿನ ಇಂಡಿಗೋ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿರುವ ಶಂಕೆಯಿಂದಾಗಿ ಕಸ್ಟಮ್ಸ್ ಗುಪ್ತಚರ ದಳದ ಕಾರ್ಯಾಚರಣೆ ನಡೆಸಿದ್ದು ವಿಮಾನದ ಸೀಟಿನಡಿ ಅಡಗಿಸಿಟ್ಟಿದ್ದ ಸುಮಾರು 33.80 ಲಕ್ಷದ 6 ಬಿಸ್ಕತ್ ಗಳು ಪತ್ತೆ ಹಚ್ಚಿದ್ದಾರೆ.
ಇನ್ನು ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸುತ್ತಿದ್ದವರ ಬಂಧನಕ್ಕಾಗಿ ಅಧಿಕಾರಿಗಳು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.